ಸಿಂಧನೂರು ತಾಲೂಕಿನ ಗುಂಜಳ್ಳಿಕ್ಯಾಂಪ್ ಅಂ.ಸಂ. 99 ನ್ಯಾಯಬೆಲೆ ಅಂಗಡಿಯಲ್ಲಿ ಬುಧವಾರ ಆಹಾರ ಇಲಾಖೆಯ ಶಿರಸ್ತೇದಾರ್ ಆನಂದ ಮೋಹನ್ ದಾಸ್ತಾನು ಪರಿಶೀಲಿಸಿದರು.  
ರಾಯಚೂರು

ನ್ಯಾಯಬೆಲೆ ಅಂಗಡಿಯಲ್ಲಿ 45.51 ಕ್ವಿಂ. ಹೆಚ್ಚುವರಿ ಅಕ್ಕಿ

ಪ್ರಮುಖ ಮುಖ್ಯಾಂಶಗಳು

  • ಶಿರಸ್ತೇದಾರ್ ಪರಿಶೀಲನೆ ವೇಳೆ ಪತ್ತೆ
  • ಸಿಂಧನೂರು ಗುಂಜಳ್ಳಿಕ್ಯಾಂಪ್ ಹೆಚ್ಚುವರಿ ದಾಸ್ತಾನು
ಸಿಂಧನೂರು: ತಾಲೂಕಿನ ಗುಂಜಳ್ಳಿಕ್ಯಾಂಪ್ ಅಂ.ಸಂ. 99 ನ್ಯಾಯಬೆಲೆ ಅಂಗಡಿಯಲ್ಲಿ ಬುಧವಾರ ಆಹಾರ ಇಲಾಖೆ ಆಹಾರ ಇಲಾಖೆಯ ಶಿರಸ್ತೇದಾರ್ ಆನಂದ ಮೋಹನ್ ಪರಿಶೀಲನೆ ವೇಳೆ ಹೆಚ್ಚುವರಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.
ಗುಂಜಳ್ಳಿಕ್ಯಾಂಪ್‌ನ ರಾಜಶೇಖರ ತುರ್ವಿಹಾಳ ನಿರ್ವಹಣೆಯ ನ್ಯಾಯಬೆಲೆ ಅಂಗಡಿಯಲ್ಲಿ ದಾಸ್ತಾನು ಪರಿಶೀಲಿಸಿದಾಗ ಒಟ್ಟು 255 ಚೀಲ ಅಕ್ಕಿ (ಅಂ.127.50 ಕ್ವಿಂಟಾಲ್) ಕಂಡುಬಂದಿದೆ. ದಿನದ ಅಂಗಡಿಯ ಆನ್‌ಲೈನ್ ದಾಸ್ತಾನು ಪರಿಶೀಲಿಸಿದಾಗ ಪ್ರಾರಂಭಿಕ ದಾಸ್ತಾನು ಒಟ್ಟು 81 ಕ್ವಿಂಟಾಲ್ 990 ಕೆ.ಜಿ. ಇದ್ದು, ದೈಹಿಕ ಹಾಗೂ ಆನ್‌ಲೈನ್ ದಾಸ್ತಾನು ತಾಳೆ ಮಾಡಿದಾಗ ಒಟ್ಟು 45.51 ಕ್ವಿಂಟಾಲ್ ಅಕ್ಕಿ ಹೆಚ್ಚುವರಿ ಇರುವುದು ಪತ್ತೆಯಾಗಿದೆ.
ನಿಯಮ ಉಲ್ಲಂಘಿಸಿರುವುದು ಮೇಲ್ನೊಟಕ್ಕೆ ಕಂಡುಬಂದಿದ್ದರಿಂದ ಮುಂದಿನ ಕ್ರಮಕ್ಕೆ ಆಹಾರ ಇಲಾಖೆ ಡಿಡಿಗೆವರದಿ ಸಲ್ಲಿಸಲಾಗಿದೆ ಎಂದು ತಹಸೀಲ್ದಾರ್ ಅರುಣ್ ದೇಸಾಯಿ ತಿಳಿಸಿದ್ದಾರೆ.