ರಾಯಚೂರಿನ ಕೃಷಿ ಎಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಬುಧವಾರ ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಇಲಾಖೆಯಿಂದ ಅಂತರ್ಜಲ-ಸಂಬಂಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ ಕುರಿತು 3ನೇ ಶ್ರೇಣಿ ತರಬೇತಿ ಕಾರ್ಯಕ್ರಮಕ್ಕೆ ಬೆಂಗಳೂರಿನ ಎಸ್‌ಡಬ್ಲೂೃಆರ್ ಪ್ರಾದೇಶಿಕ ನಿರ್ದೇಶಕ ಜಿ.ಕೃಷ್ಣಮೂರ್ತಿ ಚಾಲನೆ ನೀಡಿದರು.
- ಅಂತರ್ಜಲ-ಸಂಬಂಧಿತ ಸಮಸ್ಯೆಗಳು, ಅಂತರ್ಜಲ ನಿರ್ವಹಣೆ ಕುರಿತು 3ನೇ ಶ್ರೇಣಿ ತರಬೇತಿ
- ಸಮರ್ಥ ಬಳಕೆ, ನಿರ್ವಹಣೆಯ ಕುರಿತು ಜಾಗರೂಕರಾಗಬೇಕಾಗಿದೆ
- ಎಸ್‌ಡಬ್ಲೂೃಆರ್ ಪ್ರಾದೇಶಿಕ ನಿರ್ದೇಶಕ ಜಿ.ಕೃಷ್ಣಮೂರ್ತಿ ಸಲಹೆ
ರಾಯಚೂರು ಕೃಷಿ, ಕೈಗಾರಿಕೆ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಅಂತರ್ಜಲವು ಒಂದು ವಿಶ್ವಾಸಾರ್ಹ ಮೂಲವಾಗಿದೆ. ಅದನ್ನು ಸಮರ್ಥ ಬಳಕೆ ಹಾಗೂ ನಿರ್ವಹಣೆಯ ಬಗ್ಗೆ ನಾವು ಜಾಗರೂಕರಾಗಬೇಕಾಗಿದೆಂದು ಬೆಂಗಳೂರಿನ ಎಸ್‌ಡಬ್ಲೂೃಆರ್ ಪ್ರಾದೇಶಿಕ ನಿರ್ದೇಶಕ ಜಿ.ಕೃಷ್ಣಮೂರ್ತಿ ಹೇಳಿದರು.
ನಗರದ ಕೃಷಿ ಎಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಬುಧವಾರ ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಕೇಂದ್ರ ಬೆಂಗಳೂರಿನ ನೈಋತ್ಯ ಪ್ರದೇಶದ ಅಂತರ್ಜಲ ಮಂಡಳಿ ವತಿಯಿಂದ ಜಲಚರ ನಕ್ಷೆ, ಅಂತರ್ಜಲ-ಸಂಬಂಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ ಕುರಿತು 3ನೇ ಶ್ರೇಣಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.
ಇತ್ತಿಚಿಗೆ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಅಂತರ್ಜಲದ ಬಳಕೆಯ ಪ್ರಮಾಣ ಮಿತಿ ಮೀರುತ್ತಿದೆ ಹಾಗೂ ಅದು ಅನಿವಾರ್ಯ ಇದರಿಂದಾಗಿ ದೇಶದ ಆನೇಕ ಭಾಗಗಳಲ್ಲಿ ಅಂತರ್ಜಲದ ಲಭ್ಯತೆಯು ಕಡಿಮೆಯಾಗುತ್ತಿದೆ. ಹಾಗೆಯೇ ಅದರ ಗುಣದಲ್ಲಿ ಏರುಪೇರಾಗುತ್ತಿದೆ. ಇವೆಲ್ಲ ಕಾರಣಗಳಿಂದ ಅಂತರ್ಜಲದ ನೆಲದೊಳಗೆ ಭೂಮಿಯ ಮೇಲ್ಪದರಗಳಲ್ಲಿ ಶಿಥಿಲಗೊಂಡ ಶಿಲಾರಚನೆಗಳಲ್ಲಿ ಹಾಗೂ ಆಳಭಾಗಗಳಲ್ಲಿ ಬಿರುಕು ಹಾಗೂ ಅಪಾಯದ ಪರಿಸ್ಥಿತಿಯನ್ನು ತಂದೊಡ್ಡಿದೆ ಇದರೊಂದಿಗೆ ಹಲವಾರು ಸಮಸ್ಯೆಗಳೂ ನಮಗೆ ಎದುರಾಗಿವೆ ಎಂದರು.
ದೇಶದಲ್ಲಿ ಸುಮಾರು ಶೇ.65 ನೀರಾವರಿ ಹೊಂದಿದೆ. ಶೇ.85 ಗ್ರಾಮೀಣ ಕುಡಿಯುವ ನೀರು ಮತ್ತು ಕೈಗಾರಿಕಾ ಅಗತ್ಯಗಳನ್ನು ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಸಂಪನ್ಮೂಲಗಳಿಂದ ಪೂರೈಸಲಾಗುತ್ತದೆ. ನಮ್ಮ ನಗರ ಪ್ರದೇಶಗಳು ವಿಸ್ತಾರವಾಗುತ್ತಿದ್ದಂತೆ ಹವಾಮಾನ ಸವಾಲುಗಳು ಹೆಚ್ಚಗುತ್ತವೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳ ಜಲಭೂವೈಜ್ಞಾನಿಕ ಚೌಕಟ್ಟನ್ನು ವ್ಯಾಪಕವಾಗಿ ನಕ್ಷೆ ಮಾಡಿದೆ. ಮೇಲ್ವಿಚಾರಣೆ ಮಾಡಿದೆ ಮತ್ತು ಅಧ್ಯಯನ ಮಾಡಿದೆ. ಆಳವಿಲ್ಲದ ಮತ್ತು ಆಳವಾದ ಜಲಚರಗಳನ್ನು ಒಳಗೊಂಡ 2,262 ಮೇಲ್ವಿಚಾರಣಾ ಕೇಂದ್ರಗಳೊಅದಿಗೆ ನಾವು ಅತ್ಯಂತ ಸಮಗ್ರ ಅಂತರ್ಜಲ ದತ್ತಾಂಶಗಳಲ್ಲಿ ಒಂದನ್ನು ರಚಿಸಿದ್ದೇವೆ ಎಂದರು.
ಕೃಷಿ ವಿವಿಯ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ, ಜಲ ವೃತ್ತಿಪರರು, ವಿದ್ಯಾರ್ಥಿಗಳು, ಸ್ಥಳೀಯ ಎನ್‌ಜಿಒಗಳು, ರೈತರು, ಪಂಚಾಯತ್ ಕಾರ್ಯಕರ್ತರು ಮತ್ತು ಯುವಕರಿಗೆ 3ನೇ ಶ್ರೇಣಿ ಕಾರ್ಯಕ್ರಮಗಳು ಮತ್ತು ರೈತರು ಮತ್ತು ಗ್ರಾಮೀಣ ಸಮುದಾಯಗಳಿಗೆ ಸಾರ್ವಜನಿಕ ಸಂವಹನ ಕಾರ್ಯಕ್ರಮಗಳು ಮತ್ತು ಸಾಮೂಹಿಕ ಜಾಗೃತಿ ಕಾರ್ಯಕ್ರಮಗಳು ನಂತಹ ವ್ಯಾಪಕವಾದ ತಳಮಟ್ಟದ ಚಟುವಟಿಕೆಗಳ ಮೂಲಕ, ಸಾವಿರಾರು ಪಾಲುದಾರರಿಗೆ ಮಳೆನೀರು ಕೊಯ್ಲು, ಅಂತರ್ಜಲ ಸಂರಕ್ಷಣೆ, ಕೃತಕ ಮರುಪೂರಣ ಮತ್ತು ಜವಾಬ್ದಾರಿಯುತ ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ವಿಭಾಗದ ಡೀನ್ ಡಾ.ಎಂ.ಎಸ್. ಅಯ್ಯನಗೌಡರು, ವಿಜ್ಞಾನಿ ಡಾ.ಜೆ.ದವಿತುರಾಜ್, ಡಾ.ಎಂ.ಗೋಬಿನಾಥ, ಎನ್.ನರಸಿಂಹಲು, ಶರಣಗೌಡ ಹಿರೇಗೌಡ ಸೇರಿ ಅನೇಕರು ಇದ್ದರು.