ಮಾನ್ವಿ ಕಿಲ್ಲಾ ಪ್ರದೇಶದಲ್ಲಿ ದೊರೆತ ಪ್ರಾಚೀನ ತಾಮ್ರದ ನಾಣ್ಯಗಳು. ಮಾನ್ವಿ ಕಿಲ್ಲಾ ಪ್ರದೇಶದಲ್ಲಿ ತಾಮ್ರದ ನಾಣ್ಯಗಳು ಪತ್ತೆಯಾದ ಸ್ಥಳಕ್ಕೆ ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಬಿ.ದೇವಮಾನೆ, ಕಂದಾಯ ನಿರೀಕ್ಷಕರಾದ ಚರಣಸಿಂಗ್, ಸಿಬ್ಬಂದಿ ಇದ್ದರು.  
ರಾಯಚೂರು

360 ತಾಮ್ರದ ನಾಣ್ಯಗಳು ಪತ್ತೆ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಮನೆಗೆ ಅಡಿಪಾಯ ಅಗೆಯುವಾಗ ಪತ್ತೆ
  • ಮಾನ್ವಿ ನಾಣ್ಯಗಳು ಪೊಲೀಸ್ ಇಲಾಖೆಗೆ
ಮಾನ್ವಿ: ಕಿಲ್ಲಾ ಪ್ರದೇಶದಲ್ಲಿ ಮನೆಗೆ ಅಡಿಪಾಯ ಅಗೆಯುವಾಗ ಪ್ರಾಚೀನ 360 ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ಮಾಹಿತಿ ಮೇರೆಗೆ ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಸ್ಥಳಕ್ಕಾಗಮಿಸಿ ನಾಣ್ಯಗಳನ್ನು ವಶಕ್ಕೆ ಪಡೆದು ಪೊಲೀಸ್ ಇಲಾಖೆಗೆ ನೀಡಿದ್ದಾರೆ.
ನಾಣ್ಯಗಳ ಮೇಲೆ ಉರ್ದು ಲಿಪಿಯಿದ್ದು, ಈ ಭಾಗದಲ್ಲಿ ಆಡಳಿತ ನಡೆಸಿದವರ ಕಾಲಮಾನದಲ್ಲಿ ಚಲಾವಣೆ ಇರುವ ನಾಣ್ಯಗಳಾಗಿರಬಹುದು ಎಂದರು. ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಬಿ.ದೇವಮಾನೆ, ಕಂದಾಯ ನಿರೀಕ್ಷಕ ಚರಣಸಿಂಗ್, ಕಂದಾಯ ಇಲಾಖೆ ಅಧಿಕಾರಿಗಳು, ಪುರಸಭೆ ಸಿಬ್ಬಂದಿ ಇದ್ದರು.