ಪಿ.ಜೆ.ಜೆಮ್ಸ್  
ರಾಯಚೂರು

13 ನೇ ಮಹಾಧಿವೇಶನ ರಾಯಚೂರಿನಲ್ಲಿ ಆಯೋಜನೆ

ರಾಚಯ್ಯ ಸ್ವಾಮಿ
ರಾಯಚೂರು ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷದ 13 ನೇ ಮಹಾಧಿವೇಶನ ಸೆ.16 ರಿಂದ 20ವರೆಗೆ ರಾಯಚೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆಂದು ಪಕ್ಷ ಪ್ರಧಾನ ಕಾರ್ಯದರ್ಶಿ ಪಿ.ಜೆ.ಜೆಮ್ಸ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧಿವೇಶನದಲ್ಲಿ ಸಾಮ್ರಾಜ್ಯಶಾಹಿ ಯುದ್ಧ, ಫ್ಯಾಸಿಸಂ ಹಾಗೂ ಜಾತಿ ವಿನಾಶದ ಕುರಿತು ವಿಚಾರಗೋಷ್ಟಿಗಳು ನಡೆಯಲಿವೆ. 20 ದೇಶಗಳ, 18 ರಾಜ್ಯಗಳ ಪ್ರತಿನಿಧಿಗಳು, ಕಮ್ಯುನಿಷ್ಟ ಪಕ್ಷದ ನಾಯಕರುಗಳು ಭಾಗವಹಿಸಲಿದ್ದಾರೆ. ಅಧಿವೇಶನದ ಯಶಸ್ವಿಗೆ 75 ಜನರ ಒಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದೆ. ಆಡಳಿತ ವ್ಯವಸ್ಥೆ, ನ್ಯಾಯಾಂಗ, ಶಿಕ್ಷಣ, ಸಂಸ್ಕೃತಿಗಳೆಲ್ಲವೂ ಫ್ಯಾಸಿಸಂಗೆ ಹಿಡಿತಕ್ಕೆ ಸಿಲುಕಿವೆ. ಮುಸ್ಲಿಂರು ದೇಶ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ. ಚುನಾವಣಾ ಆಯೋಗವನ್ನು ದುರುಪಯೋಗ ಪಡೆಸಿಕೊಂಡು ಎಸ್‌ಐಆರ್ ಮೂಲಕ ಜನರ ಮೂಲಭೂತ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಆರ್‌ಎಸ್‌ಎಸ್ ಪ್ರೇರಿತವಾಗಿ ಮನುಸೃತಿಯ ಚಿಂತನೆಗಳನ್ನು ಹೇರಲಾಗುತ್ತಿದೆ. ಕಮ್ಯುನಿಷ್ಟ ಚಳುವಳಿ ಸೈದ್ದಾಂತಿಕ, ರಾಜಕೀಯ ಹಿನ್ನಡೆ ಎದುರಿಸುತ್ತಿದೆ ಎಂದರು.
ಪಕ್ಷದ ಪಾಲಿಟಿ ಬ್ಯುರೋ ಸದಸ್ಯ ಆರ್.ಮಾನಸಯ್ಯ ಮಾತನಾಡಿ, ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಯಚೂರಿನಲ್ಲಿ ಮಹಾಧಿವೇಶನ ನಡೆಯಲಿದೆ. ಅಧಿವೇಶನದ ಯಶಸ್ವಿಗೆ ಎಲ್ಲಾ ಸಂಘಟನೆಗಳು, ಚಳುವಳಿಗಾರರ ಒಳಗೊಂಡ ಸ್ವಾಗತ ಸಮಿತಿ ರಾಘವೇಂದ್ರ ಕುಷ್ಟಗಿ, ಆರ್.ಮಾನಸಯ್ಯ ಪ್ರದಾನ ಸಂಚಾಲಕತ್ವದಲ್ಲಿ ರಚಿಸಲಾಗಿದೆ. ಎಂ.ಡಿ.ಇಟ್ಬಾಲ್, ಎಚ್.ಆರ್.ಬಡಿಗೇರ, ವೀರಭದ್ರಪ್ಪ, ರವಿಂದ್ರನಾಥ ಪಟ್ಟಿ, ಉಪಾಧ್ಯಕ್ಷರಾಗಿ, ಎಂ.ಡಿ.ಅಮೀರ ಅಲಿ, ಎಂ.ಗಂಗಾಧರ ಸ್ವಾಗತ ಸಮಿತಿ ಸಂಚಾಲಕರಾಗಿ, ಬಿ.ಬಸವರಾಜ, ನೂರಜಹಾನ, ಖಾಜಾ ಅಸ್ಲಂ ಪಾಷಾ, ಜೆ.ಬಿ.ರಾಜು, ರಾಜುಪಟ್ಟಿ, ಬಾಬುಬಂಡಾರಿಗಲ್, ಗುರುರಾಜ ಗೌಡೂರು, ನಾರಾಯನ ಬೆಳಗುರ್ಕಿ, ಎಂ.ನಿರಂಜನ್ ಕಬೀರ್ ಸೇರಿ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ರಚಿಸಲಾಗಿದೆ. ಅಧಿವೇಶನದಲ್ಲಿ ದೇಶ ಎದುರಿಸುತ್ತಿರುವ ಸಂದ್ದಿಗೆ ಪರಸ್ಥಿತಿ ಕುರಿತು ಸಮಾಲೋಚಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಮೀರ ಅಲಿ, ಎಂ.ಗಂಗಾಧರ ಇದ್ದರು.