ರಾಯಚೂರಿನ ಕನ್ನಡ ಭವನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಖ್ಯಾತ ವೈದ್ಯ ಡಾ. ರವಿ ರಾಜೇಶ್ವರ್ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಕನ್ನಡ ಕ್ರಿಯಾ ಸಮಿತಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಬಾವಸಲಿ, ಪ್ರಗತಿಪರ ಹೋರಾಟಗಾರ ಮಲ್ಕಪ್ಪ ಪಾಟೀಲ್, ಕಸಾಪ ತಾಲೂಕು ಅಧ್ಯಕ್ಷ ಡಾ. ಬಿ. ವಿಜಯರಾಜೇಂದ್ರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮಣ್ಣ ಬೋಯರ್, ರಾವುತ್ ರಾವ್ ಬರೂರ್, ಶಿಕ್ಷಕಿ ವೈಶಾಲಿ ಪಾಟೀಲ್ ಇದ್ದರು. 
ರಾಯಚೂರು

ಪರಿಷತ್ತಿನ 112 ನೇ ಸಂಸ್ಥಾಪನಾ ದಿನಾಚರಣೆ ಕನ್ನಡ ನೆಲ, ಜಲ,ಭಾಷೆಯ ಕೊಡುಗೆ ಅಪಾರ

ರಾಯಚೂರು
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ 112 ವರ್ಷಗಳಾದವು ಪರಿಷತ್ತಿಗೆ ಮತ್ತು ಕನ್ನಡ ನೆಲ, ಜಲ,ಭಾಷೆಯ ಉಳುವಿಗಾಗಿ ಕನ್ನಡ ವಿದ್ವಾಂಸರ ಕವಿಗಳ ಸಾಹಿತಿಗಳ ಕೊಡುಗೆ ಅಪಾರವಾದದ್ದೆಂದು ಖ್ಯಾತ ವೈದ್ಯ ಡಾ. ರವಿ ರಾಜೇಶ್ವರ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟಕವಿ ಕುವೆಂಪು ರವರು ಕನ್ನಡದ ಬಗ್ಗೆ ಬರೆದಷ್ಟು ಹೇಳಿದವರು.
ಎಲ್ಲಾದರು ಇರು, ಎಂತಾದರೂ ನೀ ಕನ್ನಡವಾಗಿರು, ಕನ್ನಡಕ್ಕೆ ಕೈ ಎತ್ತಿದರೆ ನಿನ್ನ ಕೈ ಕಲ್ಪವೃಕ್ಷವಾಗುವುದು ಎನ್ನುವ ಕವಿವಾಣಿ ಹೇಳಿ ಕನ್ನಡ ಕಾರ್ಯಕ್ರಮದಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಸೇರಬೇಕು ಕನ್ನಡ ಉಳಿಸುವುದು ಬಳಸುವುದು ನಮ್ಮಲ್ಲರ ಕರ್ತವ್ಯವಾಗಿದೆ ಪರಿಷತ್ತಿನ ಉದ್ದೇಶಗಳ ಈಡೇರಿಕೆಗೆ ನಾವು ಕೈ ಜೋಡಿಸಬೇಕು ಎಂದರು.

ಶಿಕ್ಷಕಿ ವೈಶಾಲಿ ಪಾಟೀಲ್ ಉಪನ್ಯಾಸ ನೀಡಿ, ಪ್ರತಿಯೊಂದು ಸಮುದಾಯದ ಸಂಸ್ಕೃತಿ, ಆಚಾರ, ವಿಚಾರ ,ಅಸ್ಮಿತೆಯು ಅದರ ಭಾಷೆಯಲ್ಲಿ ಅಡಗಿರುತ್ತದೆ. ಅಂತಹ ಭಾಷೆಯನ್ನ ಕಷ್ಟಪಟ್ಟು ಬೆಳಸಿದ ಪರಿಷತ್ತಿಗೆ 112ರ ಸಂಭ್ರಮ. ಕನ್ನಡಿಗರಿಗೆ ಇಂದು ಪವಿತ್ರ ದಿನನವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ತ್ರಿಮೂರ್ತಿಗಳೆಂದರೆ ಸರ್.ಎಂ. ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅಪಾರ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಪರಿಷತ್ತಿನ ವಾರ್ಷಿಕ ಕಾರ್ಯಕ್ರಮಗಳಾದ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ನೆಡೆಯುವ ಸಾಹಿತ್ಯ ಸಮ್ಮೇಳನಗಳು. ದತ್ತಿನಿಧಿ ಕಾರ್ಯಕ್ರಮಗಳು, ಪುಸ್ತಕ ಮೇಳಗಳು ಮತ್ತು ಪ್ರತಿ ವರ್ಷ ನಡೆಯುವ ಕಾವ, ಜಾಣ, ರತ್ನ ಪರೀಕ್ಷೆಗಳ ಬಗ್ಗೆ ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿದರು.

ನಂತರ ಸಂಸ್ಥಾಪನಾ ದಿನಾಚರಣೆಯ ನಿಮಿತ್ತ ಗಡಿನಾಡು ಕನ್ನಡ ಹೋರಾಟಗಾರ ಮಲ್ಲನಗೌಡ ಹಿಂದುಪೂರ, ಚಿತ್ರ ಕಲಾವಿದ ಹೇಮರೆಡ್ಡಿ ಎಂ., ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ ಯವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಕ್ರಿಯಾ ಸಮಿತಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಬಾವಸಲಿ, ಪ್ರಗತಿಪರ ಹೋರಾಟಗಾರ ಮಲ್ಕಪ್ಪ ಪಾಟೀಲ್, ಕಸಾಪ ತಾಲೂಕು ಅಧ್ಯಕ್ಷ ಡಾ. ಬಿ. ವಿಜಯರಾಜೇಂದ್ರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮಣ್ಣ ಬೋಯರ್, ರಾವುತ್ ರಾವ್ ಬರೂರ್ ಸೇರಿ ಅನೇಕರು ಇದ್ದರು.