ರಾಯಚೂರಿನ ಕಿಲ್ಲೇ ಮಠದಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ 112 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶ್ರೀ ಶಾಂತಮಲ್ಲ ಶಿವಾಚಾರ್ಯರು ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ, ಹಿರಿಯ ಸಾಹಿತಿ ವೆಂಕಟರಾವ್ ಕುಲಕರ್ಣಿ,ವೀರಹನುಮಾನ, ಬಿಇಓ ಡಾ. ಈರಣ್ಣ ಕೋಸಗಿ, ಡಾ.ಬಿ.ಎಂ.ಶರಭೇಂದ್ರ ಸ್ವಾಮಿ,ಮೋಯಿನುಲ್ ಹಕ್, ಯೂನುಸ್ ಬಾಬು, ಬಸವರಾಜ ಜಿ., ಸೈಯದ್ ಹಫೀಜುಲ್ಲಾ ಖಾದ್ರಿ, ವೈಶಾಲಿ ಪಾಟೀಲ್, ರಾವುತರಾವ್ ಬರೂರ ಇದ್ದರು. 
ರಾಯಚೂರು

ಕಸಾಪದಿಂದ 112 ನೇ ಸಂಸ್ಥಾಪನಾ ದಿನಾಚರಣೆ ಸಾಹಿತ್ಯದ ಕಡೆ ಹೆಚ್ಚಿನ ಆಸಕ್ತಿ ಅವಶ್ಯಕ- ಶ್ರೀ ಶಾಂತಮಲ್ಲ ಶಿವಾಚಾರ್ಯ

ರಾಯಚೂರು
ದೇಶದಲ್ಲಿ ಶೇ.90ರಷ್ಟು ಜನರ ಗಮನ ಮೊಬೈಲ್‌ನತ್ತಲೇ ಇರುತ್ತಾರೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಸಾಹಿತ್ಯವನ್ನು ಓದುವುದು ತುಂಬಾ ಅವಶ್ಯಕವಾಗಿದೆಂದು ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಹೇಳಿದರು.

ನಗರದ ಕಿಲ್ಲೇ ಮಠದಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ 112 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಕೇವಲ ಅಂಕಗಳಿಂದ ಅಳೆಯಬಾರದೆಂದು ಅಂದಿನ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳುತ್ತಿದ್ದರು. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ, ಸಾಹಿತ್ಯ ಪರಿಷತ್ತು ನೀಡುವ ಇಂತಹ ಪ್ರೋತ್ಸಾಹಗಳನ್ನು ಬಳಸಿಕೊಂಡು ತಮ್ಮ ಬುದ್ಧಿಶಕ್ತಿ ಹಾಗೂ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು ಸನ್ಮಾನ ಮತ್ತು ಶಾಲುಗಳಿಗೆ ನೀಡುವ ಬೆಲೆಗಿಂತ ನಮಗೆ ಗೌರವ ನೀಡುವ ಸಂಸ್ಥೆಯ ಮೌಲ್ಯ ದೊಡ್ಡದು. ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಮೂಲಕ ಅವರ ಭವಿಷ್ಯಕ್ಕೆ ನಾಂದಿ ಹಾಡುತ್ತಿದೆ ಎಂದರು.

ಹಿರಿಯ ಸಾಹಿತಿ ವೆಂಕಟರಾವ್ ಕುಲಕರ್ಣಿ ಉಪನ್ಯಾಸ ನೀಡಿ, ಕನ್ನಡ ನಾಡು, ಭಾಷೆ, ನೆಲ, ಜಲ ಸಂರಕ್ಷಣೆ ಮತ್ತು ಜವಾಬ್ದಾರಿ ನಮ್ಮ ಮೇಲಿದೆ. ತಂದೆ, ತಾಯಿ, ಅತಿಥಿಗಳ ಸೇವೆ ಮಾಡುವ ಜತೆಗೆ ಈ ಭೂಮಿ ತಾಯಿಯ ಸೇವೆ ಮಾಡುವ ಜವಾಬ್ದಾರಿಯು ನಮ್ಮ ಮೇಲೆ ಇರುವುದರ ಹಿನ್ನೆಲೆಯಲ್ಲಿ ಕನ್ನಡ ನಾಡು ನುಡಿಗೆ 2500 ವರ್ಷಗಳ ಇತಿಹಾಸವಿದೆ. ಸಾಹಿತ್ಯ ಚರಿತ್ರೆಯ ನಡೆದು ಬಂದ ದಾರಿಯನ್ನು ವಿವರಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ ಮಾತನಾಡಿ, ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ವಿವರಿಸುತ್ತಾ, ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ತೆಗೆದುಕೊಂಡು ಇಲ್ಲಿಗೆ ಸುಮ್ಮನೆ ಕೂಡಬೇಡಿ, ಪ್ರಶಸ್ತಿ ತೆಗೆದುಕೊಂಡಿದ್ದಕ್ಕಾಗಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮುಂದಿನ ದಿನಗಳಲ್ಲಿ ಪಿಯುಸಿಯಲ್ಲಿ ಇನ್ನು ಉತ್ತಮ ಅಂಕಗಳನ್ನು ಪಡೆದುಕೊಳ್ಳಿ ಎಂದು ಕಿವಿ ಮಾತನ್ನು ಹೇಳಿದರು.

ನಂತರ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಇಓ ಡಾ. ಈರಣ್ಣ ಕೋಸಗಿ, ಸಾಹಿತಿ ವೀರಹನುಮಾನ, ಪ್ರಮುಖರಾದ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ,ಮೋಯಿನುಲ್ ಹಕ್, ಯೂನುಸ್ ಬಾಬು, ಬಸವರಾಜ ಜಿ., ಸೈಯದ್ ಹಫೀಜುಲ್ಲಾ ಖಾದ್ರಿ, ವೈಶಾಲಿ ಪಾಟೀಲ್, ರಾವುತರಾವ್ ಬರೂರ ಸೇರಿ ಅನೇಕರು ಇದ್ದರು.