ದೇವದುರ್ಗದ ಬಿಜೆಪಿ ಕಚೇರಿಯಲ್ಲಿ ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವ ದಿನ ಆಚರಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಡಾ.ಶರಣಬಸವ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಸವರಾಜ್ ಅಕ್ಕರಿಕಿ, ನಗರ ಘಟಕ ಅಧ್ಯಕ್ಷ ಸತೀಶ್ ಬಂಡೆಗುಡ್ಡ, ಪ್ರಮುಖರಾದ ಬಸನಗೌಡ ಮುಲ್ಕಿ, ಮಲ್ಲಮ್ಮ ಸೋಮಶೇಖರ್, ಮಂಜುಳಾ, ಧನಲಕ್ಷ್ಮೀ, ಜಯಶ್ರೀ ದೇವಿಕಾ ಇದ್ದರು.
- ವಂದೇ ಮಾತರಂ
- 150ನೇ ವಾರ್ಷಿಕೋತ್ಸವ
ರಾಷ್ಟ್ರೀಯತೆ ಬೆಳೆಸಿದ ವಂದೇ ಮಾತರಂ ಗೀತೆ
ದೇವದುರ್ಗ: ಸ್ವಾತಂತ್ರೃ ಹೋರಾಟ ಸಂದರ್ಭದಲ್ಲಿ ದೇಶದ ಜನರನ್ನು ಒಗ್ಗೂಡಿಸಲು ರಚಿಸಿದ ವಂದೇ ಮಾತರಂ ಗೀತೆ ಕೇಳಿದರೆ ಎಲ್ಲರಲ್ಲೂ ದೇಶಭಕ್ತಿ ಮೂಡುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ ಹೇಳಿದರು.
ಪಟ್ಟಣದ ಬಿಜೆಪಿ ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಂದೇ ಮಾತರಂ ಗೀತೆ ರಾಷ್ಟ್ರೀಯ ಚಳವಳಿಯಾಗಿ ರೂಪುಗೊಂಡಿತ್ತು. 1875ರಲ್ಲಿ ಬಂಕಿಮ್‌ಚಂದ್ರ ಚಟರ್ಜಿ ಗೀತೆಯನ್ನು ರಚಿಸಿದರು. ಈ ಗೀತೆ ಭಾರತೀಯರಲ್ಲಿ ರಾಷ್ಟ್ರೀಯತೆ ಭಾವನೆ ಉದ್ದೀಪನಗೊಳಿಸಿತು. ಇದರಿಂದ ಭಾರತೀಯರೆಲ್ಲರೂ ಬ್ರಿಟಿಷರ ವಿರುದ್ಧ ಸ್ವಾತಂತ್ರೃ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿತು. ದೇಶದ ಪ್ರಥಮ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ 1950ರಲ್ಲಿ ವಂದೇ ಮಾತರಂಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಿ ಗೌರವಿಸಿದರು. ಭಾರತ ವಿವಿಧತೆಯಲ್ಲಿ ಏಕತೆ ಸಾಧಿಸಿದ ರಾಷ್ಟ್ರ. ಬಹುಸಂಸ್ಕೃತಿಯ ನಾಡಾಗಿದ್ದು, ಎಲ್ಲ ವರ್ಗದ ಜನತೆ ಸಹಬಾಳ್ವೆಯನ್ನು ಸಾಧಿಸಿ ಸಮಗ್ರ ರಾಷ್ಟ್ರದ ಹಿತ ಚಿಂತನೆಯೊಂದಿಗೆ ರಾಷ್ಟ್ರ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂದರು.
ಬಿಜೆಪಿ ಮಂಡಲದ ವಕ್ತಾರ ಬಿಬ್ಬ ಬಾಚರಸ ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅಕ್ಕರಕಿ, ನಗರ ಘಟಕ ಅಧ್ಯಕ್ಷ ಸತೀಶ್ ಬಂಡೆಗುಡ್ಡ, ಪ್ರಮುಖರಾದ ಬಸನಗೌಡ ಮುಲ್ಕಿ, ಮಲ್ಲಮ್ಮ ಸೋಮಶೇಖರ್, ಬಸವರಾಜ ಯಲಿ, ಬಸವರಾಜ ಕೊಪ್ಪರ, ರವಿಗೌಡ ಮಾತ್ಪಳ್ಳಿ, ರಮೇಶ ರಾಠೋಡ್, ಸುನೀಲ್ ಮಡಿವಾಳ, ಕೊಂಡಯ್ಯಗೌಡ, ನಿಂಗಪ್ಪ ಗೌಡೂರ, ಜಾಕೀರ್ ಹುಸೇನ್, ರಮೇಶ ನಾಯಕ, ಮಂಜುಳಾ, ಧನಲಕ್ಷ್ಮೀ, ಜಯಶ್ರೀ, ದೇವಿಕಾ, ಮುಕ್ತಂಗಿ, ಬಸವರಾಜ ಸಾಹು, ವಿನೋದ್, ಅಹ್ಮದ್ ಷರೀಫ್, ಶಿವಕುಮಾರ, ನಿಂಗಯ್ಯ ಇತರರಿದ್ದರು.