ರಾಯಚೂರಿನ ಪೂರ್ಣಿಮಾ ಚಿತ್ರಮಂದಿರದ ಮುಂಭಾಗದಲ್ಲಿನ ರಸ್ತೆಯಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಯಲ್ಲಿ ನೀರು ಹರಿಯುತ್ತಿರುವುದು. 
ಜಿಲ್ಲೆ

ರಾಯಚೂರಲ್ಲಿ ಬೆಂಬಿಡದೆ ಸುರಿಯುತ್ತಿರುವ ಮಳೆ, ಮನೆಗಳಿಗೆ ನುಗ್ಗಿದ ನೀರು

Raichur

ರಾಯಚೂರು: ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಶುಕ್ರವಾರ ರಾತ್ರಿ ಜನರು ಜಾಗರಣೆ ನಡೆಸುವಂತಾಯಿತು. ಶನಿವಾರವೂ ಮಳೆ ಮುಂದುವರೆದಿದ್ದು, ಹಳ್ಳಗಳು ತುಂಬಿ ಹರಿಯುತ್ತಿವೆ.

ನಗರದ ಸಿಯಾತಲಾಬ್, ಜಲಾಲನಗರ, ಹರಿಜನವಾಡ, ಜ್ಯೋತಿ ಕಾಲನಿ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯ ಇನ್ನಿತರ ಸಾಮಗ್ರಿಗಳು ಹಾಳಾಗಿವೆ. ಚಂದ್ರಮೌಳೇಶ್ವರ ವೃತ್ತ, ಐಬಿ ರಸ್ತೆ, ಬಸವನಬಾವಿ ವೃತ್ತ ಸೇರಿ ಹಲವು ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ಹರಿದು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ತಾಲೂಕಿನ ಗಂಜಳ್ಳಿ, ವೆಂಕಟಾಪುರ, ಗುರ್ಜಾಪುರ, ಜೇಗರಕಲ್ ಸೇರಿ ಹಲವೆಡೆ ಹಳ್ಳಗಳು ತುಂಬಿ ರಸ್ತೆ ಮೇಲೆ ಹರಿದಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಹಳ್ಳದ ನೀರು ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿದೆ.

ನಿರಂತರ ಮಳೆಯಿಂದಾಗಿ ರಾಯಚೂರಿನ ದೇವಿ ನಗರದಲ್ಲಿ ಶನಿವಾರ ಮನೆಗೆ ನೀರು ನುಗ್ಗಿರುವುದು.