ಜಿಲ್ಲೆ

ಕಾಂಬ್ಳೆಗೆ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ

ರಾಯಚೂರು: ಕೇಂದ್ರ ಗೃಹ ಸಚಿವಾಲಯದಿಂದ ನೀಡಲಾಗುವ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಕ್ಕೆ ನಗರದ ಸದಾರ ಬಜಾರ್ ಪಿಐ ಉಮೇಶ ಕಾಂಬ್ಳೆ ಆಯ್ಕೆಯಾಗಿದ್ದಾರೆ. ತನಿಖಾ ವಿಭಾಗದಲ್ಲಿ ವಿಶೇಷ ತನಿಖೆ, ಕಾರ್ಯಾಚರಣೆ ಹಾಗೂ ವಿಧಿ ವಿಜ್ಞಾನದಲ್ಲಿ ನಡೆಸಿರುವ ವಿಶೇಷ ಸಾಧನೆಯನ್ನು ಪರಿಗಣಿಸಿ ರಾಷ್ಟ್ರ ಮಟ್ಟದ ಪದಕ ಪ್ರದಾನ ಮಾಡಲು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಸಹಾಯಕ ಕಾರ್ಯದರ್ಶಿ ಡಿ.ಕೆ ಘೊಷ್ ಬುಧವಾರ ಆದೇಶ ಹೊರಡಿಸಿದ್ದಾರೆ.