ತೆಲಂಗಾಣದಿಂದ ರಾಯಚೂರಿಗೆ ಅಕ್ರಮವಾಗಿ ಸೇಂದಿ ಸಾಗಿಸುತ್ತಿದ್ದ ಬಂಧಿತ ಆರೋಪಿಗಳೊಂದಿಗೆ ನೇತಾಜಿ ನಗರ ಠಾಣೆ ಪಿಎಸ್‌ಐ ವೈ.ಜಯಂತಿ, ಸಿಬ್ಬಂದಿಯಾದ ಬಷೀರ್, ಅಮರೇಶ, ಮಹ್ಮದ್ ಸಾಬ್, ರವಿಕುಮಾರ, ರಂಗಮ್ಮ ಇದ್ದಾರೆ. 
ಜಿಲ್ಲೆ

ತೆಲಂಗಾಣದ ನಂದಿನಿಯಿಂದ ನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಸೇಂದಿ ವಶ

ರಾಯಚೂರು: ತೆಲಂಗಾಣದ ನಂದಿನಿಯಿಂದ ನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಸಿಎಚ್ ಪೌಡರ್‌ನಿಂದ ತಯಾರಿಸಲಾದ 600 ಲೀಟರ್ ಸೇಂದಿಯನ್ನು ನಗರದ ಹೊರವಲಯದ ಬಿದಿರು ಮಲ್ಲಮ್ಮ ಗುಡಿ ಬಳಿ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.

ಪ್ಲಾಸಿಕ್ ಚೀಲಗಳನ್ನು ಸೇಂದಿಯನ್ನು ತುಂಬಿ ಆಟೋದಲ್ಲಿ ಸಾಗಿಸುತ್ತಿರುವಾಗ ನೇತಾಜಿನಗರ ಠಾಣೆ ಪಿಎಸ್‌ಐ ವೈ.ಜಯಂತಿ, ಸಿಬ್ಬಂದಿಯಾದ ಬಷೀರ್, ಅಮರೇಶ, ಮಹ್ಮದ್ ಸಾಬ್, ರವಿಕುಮಾರ, ರಂಗಮ್ಮ ದಾಳಿ ನಡೆಸಿದ್ದಾರೆ. ಸೇಂದಿ ಸಾಗಿಸುತ್ತಿದ್ದ ಜಲಾಲ್ ನಗರದ ಈರಣ್ಣ, ಹರಿಜನವಾಡಾದ ಪಿ.ನೀಲಕಂಠ, ಮಾರೆಮ್ಮ, ಲಕ್ಷ್ಮಿ, ಯಲ್ಲಮ್ಮ, ತಿಮ್ಮಪ್ಪ ಅವರನ್ನು ಬಂಧಿಸಲಾಗಿದೆ. ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.