{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false} 
ಜಿಲ್ಲೆ

ಶಾಲಾ ಕೊಠಡಿಗಳಿಗೆ ಮಾಟಮಂತ್ರ..?

ರಾಯಚೂರು: ಶಾಲೆಯ ಬಾಗಿಲುಗಳ ಬಳಿ ಕಿಡಿಗೇಡಿಗಳಿಂದ ಮಾಟಮಂತ್ರ ಮಾಡಿದ ರೀತಿಯಲ್ಲಿ ಕಾಯಿ, ನಿಂಬೆಹಣ್ಣು, ಕುಂಕುಮ ಹಾಕಿ ಹೋದ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದಿದೆ.

ಶಾಲೆಯ ತರಗತಿಗಳ ಕೋಣೆ, ಸಿಬ್ಬಂದಿ ಕೋಣೆ ಹಾಗೂ ಕಾರ್ಯಾಲಯದ ಕೋಣೆ ಮುಂದೆ ನಿಂಬೇಹಣ್ಣು, ಕುಂಕುಮ ಹಾಕಲಾಗಿದೆ. ಬಾಗಿಲಿಗೆ ಹಾಕಲಾಗಿದ್ದ ಬೀಗಕ್ಕೂ ಪೂಜೆ ಮಾಡಿದ ರೀತಿಯಲ್ಲಿ ಕುಂಕುಮವನ್ನು ಹಚ್ಚಲಾಗಿದೆ.

ಇದರಿಂದ ಗ್ರಾಮಸ್ಥರು, ಶಿಕ್ಷಕರು ಮತ್ತು ಮಕ್ಕಳಲ್ಲಿ ಆತಂಕ ಉಂಟಾಗಿದ್ದು, ಸ್ಥಳಕ್ಕೆ ಮಾನ್ವಿ ಪೊಲೀಸರು ಆಗಮಿಸಿ ಸ್ಥಳದಲ್ಲಿದ್ದ ವಸ್ತುಗಳನ್ನು ಬಿಸಾಡಿದ್ದಾರೆ. ಇಂತಹ ಕೃತ್ಯ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ.