ರಾಯಚೂರು: ಶತಮಾನದ ಇತಿಹಾಸ ಹೊಂದಿರುವ ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 12.11 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಲವು ವರ್ಷಗಳಿಂದ ಬ್ಯಾಂಕ್ ಆದಾಯ ಹೆಚ್ಚಳ ಮಾಡಲಾಗುತ್ತಿದೆ. 2023-24 ಸಾಲಿನಲ್ಲಿ ಇದ್ದ 50.48 ಕೋಟಿ ರೂ. ಷೇರು ಬಂಡವಾಳ 2024-25ರ ಸಾಲಿನಲ್ಲಿ 51.52 ಕೋಟಿ ರೂ.ಗೆ ಹೆಚ್ಚಿಸಿದೆ. ಅದರಂತೆ ಶೇ.93.73 ರಷ್ಟಿದ್ದ ನಿಧಿಗಳು 104.49ಕ್ಕೆ ಹೆಚ್ಚಿದೆ. 144 .21 ಕೋಟಿ ರೂ.ಗಳಿದ್ದ ಸ್ವಂತ ಬಂಡವಾಳ 156.01 ಕೋಟಿ ರೂ. ಏರಿದೆ ಎಂದರು.
ಪಡೆದ ಸಾಲದಲ್ಲಿ ಇಳಿಕೆಯಾದರೆ ಠೇವಣಿ ಸಂಗ್ರಹ ಪ್ರಮಾಣ ಹೆಚ್ಚಿದೆ. ಎನ್‌ಪಿಎದಲ್ಲಿಯೂ 10.58 ಕೋಟಿ ಅನುತ್ಪಾದಕ ಅವಕಾಶ ನೀಡಿದೆ. ಸಾಲ ವಸೂಲಾತಿಯಲಿ ಶೇ.94.48 ಪ್ರಗತಿ ಸಾಧಿಸಿದೆ. 2024ರಿಂದ ರೈತರ ಮರಣೋತ್ತರ ನಿಧಿ ಯೋಜನೆ ಜಾರಿಗೊಳಿಸಿದೆ. ಬೆಳೆ ಸಾಲ ಪಡೆದ ರೈತ ಸಾವಿಗೀಡಾದರೆ ಅವರ ಖಾತೆಯಲ್ಲಿ 50 ಸಾವಿರ ರೂ. ಕಡಿತಗೊಳಿಸುವ ಯೋಜನೆಯಡಿ 262 ಜನರು ಲಾಭ ಪಡೆದಿದ್ದಾರೆ. 2023-24 ಸಾಲಿನಲ್ಲಿ ಷೇರುದಾರರಿಗೆ ಶೇ.9 ಲಾಭಾಂಶ ಹಂಚಲಾಗಿದೆ. ರಾಜ್ಯದಲ್ಲಿಯೇ ಯುಪಿಎ ಆ್ಯಪ್ ಸೇವೆ ಆರಂಭಿಸಿದ ಎರಡನೇ ಬ್ಯಾಂಕ್ ನಮ್ಮದಾಗಿದೆ. ಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿ ಸಹಕಾರದಿಂದ ಆರ್‌ಡಿಸಿಸಿ ಬ್ಯಾಂಕ್ ಪ್ರಗತಿಯಲ್ಲಿ ಸಾಗುತ್ತಿದೆ ಎಂದರು.
ನಿರ್ದೇಶಕ ವಿಜಯಕುಮಾರ ಪಾಟೀಲ್, ಸಿಇಒ ಎಂ.ಡಿ.ಪೂಜಾರ್ ಇದ್ದರು.