ರಾಯಚೂರು: ರೈಲ್ವೆ ಹಳಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಗುರುವಾರ ಮುಂಜಾನೆ 5 ಗಂಟೆಗೆ ನಗರದ ಅರಬ್ಮೊಹಲ್ಲ ಬಳಿ ನಡೆದಿದೆ.
ನಗರದ ಡ್ಯಾಡಿ ಕಾಲನಿಯ ನಿವಾಸಿ ಎಂ.ಡಿ. ಇಸ್ಮಾಯಿಲ್ (55) ಮೃತ. ನಗರದ ಅರಬ್ಮೊಹಲ್ಲ ಬಳಿ ರೈಲ್ವೆ ಹಳಿಗೆ ಬಿದಿದ್ದು, ರೈಲು ಹರಿದ ಪರಿಣಾಮ ಇಸ್ಮಾಯಿಲ್ ತಲೆ ಹೊಡೆದುಹೋಗಿದೆ. ಕಾಲು ಕೂಡ ಕಟ್ ಆಗಿವೆ.
ನಿಜಲಿಂಗಪ್ಪ ಕಾಲನಿಯ ಭಾರತ ಮೆಡಿಕಲ್ಸ್ ಮಾಲಿಕರಾಗಿರುವ ಮೃತ ವ್ಯಕ್ತಿ ಸಾಲ ತೀರಿಸಲಾಗದೇ ಹತಾಶೆಯಿಂದ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.