ರಾಯಚೂರು ತಾಲೂಕಿನ ಚಿಕ್ಕಸುಗೂರಿನ ಜಲ ಶುದ್ಧಿಕರಣ ಕೇಂದ್ರಕ್ಕೆ ಡಿಸಿ ಕೆ.ನಿತೀಶ್ ಭೇಟಿ ನೀಡಿ ಶುದ್ಧೀಕರಣ ಘಟಕದ ಕುರಿತು ಮಾಹಿತಿ ಪಡೆದುಕೊಳ್ಳುತ್ತಿರುವುದು. ನಗರಸಬೆ ಪೌರಾಯುಕ್ತ ಗುರುಸಿದ್ದಯ್ಯ, ನಗರಸಭೆ ಕುಡಿಯುವ ನೀರು ವಿಭಾಗದ ಇಇ ನವೀನ್ ಇದ್ದರು. 
ಜಿಲ್ಲೆ

ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಿ: ಡಿಸಿ ನಿತೀಶ್ ಸೂಚನೆ

ರಾಯಚೂರು: ತಾಲೂಕಿನ ಚಿಕ್ಕಸೂಗೂರು ಜಲ ಶುದ್ಧೀಕರಣ ಘಟಕಕ್ಕೆ ಗುರುವಾರ ಜಿಲ್ಲಾಧಿಕಾರಿ ಕೆ.ನಿತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ನೀರು ಪೂರೈಸುವ ಮೊದಲು ನೀರಿನ ಟ್ಯಾಂಕ್‌ಗಳನ್ನು ಪರಿಶೀಲಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರಿನ ಶುದ್ದೀಕರಣ ಘಟಕಗಳ ನೀರನ್ನು ಪರೀಕ್ಷಿಸಿ ಕುಡಿಯಲು ಸೂಕ್ತವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕ ಪೂರೈಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು, ಬ್ಲಿಚಿಂಗ್ ಪೌಡರ್,ಅಲಂಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಿಕೊಂಡು ನೀರನ್ನು ಶುದ್ಧೀಕರಣ ಮಾಡಿ ಸರಬರಾಜು ಮಾಡಬೇಕೆಂದರು.

ಈ ಸಂದರ್ಭದಲ್ಲಿ ರಾಯಚೂರು ನಗರಸಭೆಯ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ನಗರಸಭೆ ಕುಡಿಯುವ ನೀರು ವಿಭಾಗದ ಇಇ ನವೀನ್ ತಾಂತ್ರಿಕ ವಿಭಾಗದ ಸಿಬ್ಬಂದಿಗಳು ಸೇರಿದಂತೆ ಇತರರಿದ್ದರು.