ಜಿಲ್ಲೆ

ಶಾಲೆ ವಿರುದ್ಧ ಪಾಲಕರ ಆಕ್ರೋಶ

Raichur

ಮಾಣಿಕಪ್ರಭು ದೇವಸ್ಥಾನದ ಹತ್ತಿರ ಪಾಲಕರ ಪ್ರತಿಭಟನೆ | ನವೋದಯ ಸೆಂಟ್ರಲ್ ಸ್ಕೂಲ್ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಯಚೂರು: ಶಾಲೆಗಳು ಆರಂಭವಾಗದಿದ್ದರೂ ನವೋದಯ ಸೆಂಟ್ರಲ್ ಸ್ಕೂಲ್ ಆಡಳಿತ ಮಂಡಳಿ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಕ್ರಮ ಖಂಡಿಸಿ, ಮಾಣಿಕಪ್ರಭು ದೇವಸ್ಥಾನದ ಹತ್ತಿರ ಪಾಲಕರು ಭಾನುವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ 19 ಹಿನ್ನೆಲೆಯಲ್ಲಿ ಜೀವನ ನಡೆಸುವುದು ದುಸ್ತರವಾಗಿದೆ. ನವೋದಯ ಶಾಲೆ ಆಡಳಿತ ಮಂಡಳಿ ಶೇ.10ರಷ್ಟು ಶುಲ್ಕ ಹೆಚ್ಚಿಸಿದೆ. ಶುಲ್ಕ ಕಟ್ಟಲು ವಿಳಂಬವಾದಲ್ಲಿ ಒಂದು ದಿನಕ್ಕೆ ಹೆಚ್ಚುವರಿ ದಂಡ ವಿಧಿಸುತ್ತಿದೆ. ಶಾಲೆಗಳು ನಡೆಯದಿದ್ದರೂ ಸಮವಸ್ತ್ರ ತೆಗೆದುಕೊಂಡು ಹೋಗಬೇಕು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಕಂಪ್ಯೂಟರ್, ಗ್ರಂಥಾಲಯ ಸೇರಿ ಇತರ ಶುಲ್ಕ ಸೇರಿ ಸಾವಿರಾರು ರೂ. ಪಾವತಿಲು ಒತ್ತಡ ಹೇರುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಶಾಲಾ ಆಡಳಿತ ಮಂಡಳಿಗೆ ಪಾಲಕರಿಂದ ಕೇವಲ ಬೋಧನಾ ಶುಲ್ಕ ಮಾತ್ರ ಪಡೆಯುವಂತೆ ಸೂಚನೆ ನೀಡಬೇಕು. ನಿಯಮ ಮೀರಿ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಶಾಲೆ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.