ಜಿಲ್ಲೆ

8ನೇ ವಾರ್ಡ್ ಉಳಿಸಿಕೊಂಡ ಜೆಡಿಎಸ್; ಆಡಳಿತಾರೂಢ ಕಾಂಗ್ರೆಸ್‌ಗೆ ಮುಖಭಂಗ

Raichur

ನಿಖಿತ್ ಸಲ್ಮಾಗೆ 406 ಮತಗಳ ಅಂತರದ ಗೆಲುವು

ರಾಯಚೂರು: ತೀವ್ರ ಕುತೂಹಲ ಕೆರಳಿಸಿದ್ದ 8ನೇ ವಾರ್ಡ್ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿತ್ ಸಲ್ಮಾ 406 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ನಿಖಿತ್ ಸಲ್ಮಾಗೆ 1224, ಕಾಂಗ್ರೆಸ್ ಅಭ್ಯರ್ಥಿ ಶಂಶುದ್ದೀನ್‌ಗೆ 818, ಎಸ್‌ಡಿಪಿಐ ಅಭ್ಯರ್ಥಿ ಮಹ್ಮದ್ ಗೌಸ್‌ಗೆ 153, ಪಕ್ಷೇತರ ಅಭ್ಯರ್ಥಿ ನಾಜೀಮ್ ಬೇಗಂಗೆ 355, ಮಹ್ಮದ್ ನೂರ್‌ಗೆ 345, ಮಹ್ಮದ್ ಶಾರೀಫ್‌ಗೆ 36 ಮತ ಬಂದಿದ್ದು, 3 ಮತಗಳು ನೋಟಾಕ್ಕೆ ಚಲಾವಣೆಗೊಂಡಿವೆ.

ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತ ಇದ್ದರೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದರಿಂದ ಪಕ್ಷದ ಮುಖಂಡರಿಗೆ ಮುಖಭಂಗವಾಗಿದೆ. ಮಕ್ಬುಲ್ ಕೊಲೆಯಿಂದ ಈ ಸ್ಥಾನ ತೆರವಾಗಿತ್ತು. ಮೃತನ ಕುಟುಂಬಕ್ಕೆ ಜೆಡಿಎಸ್ ಟಿಕೆಟ್ ನೀಡಿತ್ತು. ಅನುಕಂಪದ ಅಲೆ ಇವರನ್ನು ಕೈಹಿಡಿದ್ದು, 8ನೇ ವಾರ್ಡ್ ಮತ್ತ ಜೆಡಿಎಸ್ ಪಾಲಾಗಿದೆ.

ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ತಹಸಿಲ್ ಕಚೇರಿ ಎದುರು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಚುನಾವಣಾಧಿಕಾರಿ ಡಾ.ಟಿ.ರೋಣಿ ಗೆದ್ದ ಅಭ್ಯರ್ಥಿ ನಿಖಿತಾ ಸಲ್ಮಾಗೆ ಪ್ರಮಾಣಪತ್ರ ನೀಡಿದರು.