ಜಿಲ್ಲೆ

ರಾಯಚೂರು ಸರ್ಕಾರಿ ಕಾಲೇಜಿಗೆ ಬಿ ಪ್ಲಸ್ ಗ್ರೇಡ್

ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಬಿ ಪ್ಲಸ್ ಗ್ರೇಡ್ ನೀಡಿದೆ ಎಂದು ಪ್ರಾಚಾರ್ಯ ಡಾ.ಯಂಕಣ್ಣ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನ್ಯಾಕ್ ತಂಡ ಜೂ.27 ಹಾಗೂ 28ರಂದು ಭೇಟಿ ನೀಡಿದ್ದು, ಕಾಲೇಜಿನ ಮೂಲ ಸೌಕರ್ಯಗಳು, ಶಿಕ್ಷಣ ವ್ಯವಸ್ಥೆ, ಪ್ರಗತಿ, ಉಪನ್ಯಾಸಕರ ಲಭ್ಯತೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಯನ್ನು ಕ್ರೋಡೀಕರಿಸಿ ಬಿ ಪ್ಲಸ್ ಗ್ರೇಡ್ ನೀಡಿದೆ ಎಂದರು.

ಕಾಲೇಜಿನಲ್ಲಿ ಸೌಲಭ್ಯಗಳನ್ನು ಒದಗಿಸಲು ಜನ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಸಂಶೋಧನೆ, ವೃತ್ತಿಪರ ಕೋರ್ಸ್‌ಗಳ ಆರಂಭ ಸೇರಿದಂತೆ ಇತರ ಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಪ್ರಾಚಾರ್ಯ ಯಂಕಣ್ಣ ತಿಳಿಸಿದರು. ಉಪನ್ಯಾಸಕರಾದ ಡಾ.ಪ್ರಾಣೇಶ್ ಕುಲಕರ್ಣಿ, ಮಹಾಂತೇಶ ಅಂಗಡಿ, ಸೋಮನಾಥರೆಡ್ಡಿ ಇದ್ದರು.