ಜಿಲ್ಲೆ

ಅದ್ದೂರಿಯಾಗಿ ಜರುಗಿದ ಸರಪಳಿ ತುಂಡರಿಸುವ ಉತ್ಸವ

ರಾಯಚೂರು: ನಗರದ ಮೈಲಾರನಗರ ಬಡಾವಣೆಯಲ್ಲಿನ ಗುಡ್ಡದ ಮಲ್ಲಯ್ಯ ದೇವಸ್ಥಾನದ ಮಹೋತ್ಸವದ ಹಿನ್ನೆಲೆ ಸರಪಳಿ ತುಂಡರಿಸುವ ಕಾರ್ಯಕ್ರಮ ಮಂಗಳವಾರ ಅದ್ದೂರಿಯಾಗಿ ಜರುಗಿತು.

ಶ್ರೀ ಮಲ್ಲಯ್ಯ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ನಂತರ 31ನೇ ವರ್ಷದ ಸರಪಳಿ ತುಂಡರಿಸುವ ಕಾರ್ಯಕ್ರಮ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಮಲ್ಲಯ್ಯ ದೇವರಿಗೆ ಜಯಘೊಷಗಳನ್ನು ಹಾಕಿದರು.