ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದರು.  
ಜಿಲ್ಲೆ

ಮಹಾನಗರಗಳಲ್ಲಿ ಉದ್ಯೋಗಕ್ಕೆ ಮುಂದಾಗಿ

ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಉದ್ಯೋಗ ಮತ್ತು ತರಬೇತಿ ಕೋಶದಿಂದ ಮಂಗಳವಾರ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಹಾಗೂ ಇತರ ವಿವಿಧ ಕಾಲೇಜ್ ವಿದ್ಯಾರ್ಥಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು.

ಉದ್ಯೋಗ ಮತ್ತು ತರಬೇತಿ ಕೋಶದ ಸಂಚಾಲಕ ಡಾ.ಜೆ.ಎಲ್.ಈರಣ್ಣ ಮಾತನಾಡಿ, ಕಾಲೇಜ್‌ನಲ್ಲಿ ಪ್ರಥಮ ಬಾರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ನಮ್ಮ ಭಾಗದ ಗ್ರಾಮೀಣ ಪ್ರದೇಶದ ಯುವಕರು ಮಹಾನಗರಗಳಿಗೆ ತೆರಳಿ ಉದ್ಯೋಗ ಮಾಡಲು ಮುಂದಾಗಬೇಕು ಎಂದು ಹೇಳಿದರು. ಇಂಟಲಿಜೆಂಟ್ ಕ್ರಿಯೇಟಿವ್ ಸೊಲ್ಯೂಷನ್ ಸಂಸ್ಥೆ ಮುಖ್ಯಸ್ಥ ಮಹ್ಮದ್ ಫಯಾಜ್, ಜಿಎಚ್‌ಎಂಸಿ ಕೋ ಸಂಸ್ಥೆ ಅಧಿಕಾರಿ ಅಬ್ದುಲ್ ಹಮೀದ್ ಖಾನ್, ಪ್ರಾಚಾರ್ಯ ಡಾ.ಯಂಕಣ್ಣ, ಪ್ರಾಧ್ಯಾಪಕರಾದ ಡಾ.ಶಿವರಾಜಪ್ಪ, ಡಾ.ಬಸವಪ್ರಸಾದ, ಮಹಾಂತೇಶ ಅಂಗಡಿ, ಇಶ್ರತ್ ಬೇಗಂ ಇದ್ದರು.