ಜಿಲ್ಲೆ

ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ :ಜಿಪಂ ಸಿಇಒ ಶಶಿಧರ ಕುರೇರ ಸೂಚನೆ

ರಾಯಚೂರು: ಮಹತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಪಂ ಸಿಇಒ ಶಶಿಧರ ಕುರೇರ ಸೂಚನೆ ನೀಡಿದರು.

ತಾಲೂಕಿನ ಬಿಜನಗೇರಾ ಹಾಗೂ ಮಿಟ್ಟಿ ಮಲ್ಕಾಪುರ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಿಜನಗೇರಾ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಬಾಕಿ ಇರುವ ಕಾಮಗಾರಿಗಳನ್ನು ಶ್ರೀಘ್ರ ಪೂರ್ಣಗೊಳಿಸುವಂತೆ ತಿಳಿಸಿದರು.

ನಂತರ ಬೋಳಮಾನದೊಡ್ಡಿಯಿಂದ ಸಿದ್ರಾಪೂರವರೆಗೆ ಮತ್ತು ಸಿದ್ರಾಪೂರದಿಂದ ದೇವನಪಲ್ಲಿವರೆಗಿನ ರಸ್ತೆ ಕಾಮಗಾರಿ ಪರಿಶೀಲಿಸಿದರು. ಮಿಟ್ಟಿಮಲ್ಕಾಪೂರು ಗ್ರಾಪಂನ ದೇವಪಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಶಾಲಾ ಕಾಂಪೌಂಡ್, ಹೈಟೆಕ್ ಶೌಚಗೃಹ ಹಾಗೂ ಬಿಸಿಯೂಟ ಅಡುಗೆ ಕೋಣೆ ಪರಿಶೀಲಿಸಿದರು.

ಕಾರ್ಯನಿರ್ವಾಹಕ ಅಭಿಯಂತ ವೆಂಕಟೇಶ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಇರಲಾಲ್, ನರೇಗಾ ಎಡಿ ವೆಂಕಟೇಶ ದೇಸಾಯಿ ಹಾಜರಿದ್ದರು.