ಮಾರೆಪ್ಪ ಹರವಿ. 
ಜಿಲ್ಲೆ

ಭೂಮಿ, ವಸತಿಗಾಗಿ 14ರಂದು ಜನಾಗ್ರಹ ರ‌್ಯಾಲಿ

ರಾಯಚೂರು: ಭೂಮಿ ವಸತಿ ಕೊಡದೆ ನಮ್ಮ ಓಟು ಕೊಡೆವು ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರಿನಲ್ಲಿ ಫೆ.14ರಂದು ಜನಾಗ್ರಹ ರ‌್ಯಾಲಿ ಮತ್ತು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ ತಿಳಿಸಿದರು.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ರ‌್ಯಾಲಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಜಿಲ್ಲೆಯಿಂದ ಸುಮಾರು 500ಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದರು. ಪದಾಧಿಕಾರಿಗಳಾದ ಗುರುರಾಜ, ರಂಗಾರೆಡ್ಡಿ, ಗೋವಿಂದ, ನರಸಿಂಹಲು, ಆಂಜಿನೇಯ ಕುರುಬದೊಡ್ಡಿ, ಶಿವರಾಜ ಇದ್ದರು.