ಕೆ.ಹನುಮಂತಪ್ಲ ಯಾದವ 
ಜಿಲ್ಲೆ

ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು: ಹನುಮಂತಪ್ಪ ಯಾದವ

Gangavati - Shashidhara Shashidhara

ರಾಯಚೂರು: ಯಾದವ ಸಂಘದಿಂದ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಹನುಮಂತಪ್ಪ ಯಾದವ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಆ.26ರಿಂದ 28ರವರೆಗೆ ಕೃಷ್ಣ ಜನ್ಮಾಷ್ಟಮಿಯನ್ನು ನಗರದಲ್ಲಿ ಸಂಭ್ರದಿಂದ ಆಚರಿಸಲು ಸಂಘದಿಂದ ತೀರ್ಮಾನಿಸಲಾಗಿದೆ. 26ರಂದು ನಗರದ ಶ್ರೀಕೃಷ್ಣ ದೇವಸ್ಥಾನದಲ್ಲಿ ಸುಪ್ರಭಾತ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9:30ಕ್ಕೆ ನಗರದ ನಗರೇಶ್ವರ ದೇವಸ್ಥಾನದಿಂದ ಎಲ್‌ವಿಡಿ ಕಾಲೇಜು ಎದುರಿಗಿರುವ ಶ್ರೀ ಕೃಷ್ಣ ದೇವಸ್ಥಾನದವರೆಗೆ ಕೃಷ್ಣನ ಭವ್ಯ ಮೆರವಣಿಗೆಯನ್ನು ಮಾಡಲಾಗುವುದು ಎಂದರು.

ಮದ್ಯಾಹ್ನ 12 ಗಂಟೆಗೆ ಯಾದವ ಭವನದಲ್ಲಿ ಜಿಲ್ಲಾಡಳಿತದಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಆ.27ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆ.28ರಂದು ಸಂಜೆ 6.30ಕ್ಕೆ ರಥೋತ್ಸವ ನೆರವೇರಲಿದೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ತಿಮ್ಮಪ್ಪ ನಾಡಗೌಡ, ಶಿವಕುಮಾರ ಯಾದವ, ವಿಷ್ಣುಪ್ರಸಾದ್ ಯಾದವ, ಡಾ.ನಾಗೇಶ್, ತಿಕ್ಕಣ್ಣ ಯಾದವ ಸೇರಿದಂತೆ ಇನ್ನಿತರರಿದ್ದರು.