ಶರಣು ಪಾಟೀಲ್, ಅಧ್ಯಕ್ಷ, ಮಲದಕಲ್ ಗೆಳೆಯರ ಬಳಗ. 
ಜಿಲ್ಲೆ

ಜ್ಞಾನ ವೃದ್ಧಿಗೆ ರಸಪ್ರಶ್ನೆ ಸ್ಪರ್ಧೆ

Raichur

ರಾಯಚೂರು: ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಜ್ಞಾನ ವೃದ್ಧಿಗೊಳಿಸುವ ನಿಟ್ಟಿನಲ್ಲಿ ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮದಲ್ಲಿ ಡಿ.23ರಂದು ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಲದಕಲ್ ಗೆಳೆಯರ ಬಳಗದ ಅಧ್ಯಕ್ಷ ಶರಣು ಪಾಟೀಲ್ ಹೆರೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, 78 ತಂಡಗಳು ನೋಂದಣಿ ಮಾಡಿಸಿದ್ದು, ಪ್ರಥಮ ಸ್ಥಾನ ತಂಡಕ್ಕೆ 15 ಸಾವಿರ ರೂ., ದ್ವಿತೀಯ ಸ್ಥಾನ 10 ಸಾವಿರ ರೂ., ತೃತೀಯ ಸ್ಥಾನ ಪಡೆಯುವ ತಂಡಕ್ಕೆ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.

ಎರಡು ಹಂತದಲ್ಲಿ ಸ್ಪರ್ಧೆ ನಡೆಯಲಿದ್ದು, ಬಹು ಆಯ್ಕೆ ನೂರು ಪ್ರಶ್ನೆಗಳಿಗೆ ಪರೀಕ್ಷೆ ನಡೆಯಲಿದೆ. ಅತಿ ಹೆಚ್ಚು ಅಂಕ ಪಡೆದ ಐದು ತಂಡಗಳಿಗೆ ಪುನಃ ಸ್ಪರ್ಧೆ ನಡೆಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳಿಗೆ ಗಬ್ಬೂರು ಗ್ರಾಮದಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಬಳಗದ ಪದಾಧಿಕಾರಿಗಳಾದ ಕೆ.ವಿನೋದ ನಾಯಕ, ಶಿವಾನಂದ ನಾಯಕ, ಮಹೇಂದ್ರ ನಾಯಕ ಉಪಸ್ಥಿತರಿದ್ದರು.