ರಾಯಚೂರು: ಎರಡು ಪರೀಕ್ಷೆಗಳನ್ನು ಒಂದೇ ದಿನ ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಎಡವಟ್ಟಿನಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಅದೆಷ್ಟೋ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ.
ಕೆಇಎಯಿಂದ ನಡೆಸಲಾಗುತ್ತಿರುವ ಕಾಲೇಜು ಶಿಕ್ಷಣ ಇಲಾಖೆಯ ಕರ್ನಾಟಕ ಅರ್ಹತಾ ಪರೀಕ್ಷೆ(ಕೆ-ಸೆಟ್) ಪತ್ರಿಕೆ-1 ಹಾಗೂ ಪತ್ರಿಕೆ 2ರ ಪರೀಕ್ಷೆಗಳನ್ನು ನ.24ರಂದು ನಡೆಸಲು ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಅದೇ ದಿನ ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಪಕರ ಹುದ್ದೆಗಳಿಗೆ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎರಡೂ ಪರೀಕ್ಷೆಗಳಿಗೆ ನೊಂದಾಯಿಸಿಕೊಂಡ ಅಭ್ಯರ್ಥಿಗಳು ಇತ್ತ ಕೆ-ಸೆಟ್ ಪರೀಕ್ಷೆಗೆ ಹಾಜರಾಗುವುದೋ ಅಥವಾ ಪ್ರವೇಶ
ಎರಡು ಪರೀಕ್ಷೆಗಳು ಬಹುಮುಖ್ಯವಾದ್ದರಿಂದ ಪರೀಕ್ಷೆಗಳಿಗೆ ಹಾಜರಾಗುವುದು ಅನಿವಾರ್ಯವಾಗಿದೆ ಆದರೆ ಎರಡೂ ಪರೀಕ್ಷೆಗಳನ್ನು ಒಂದೇ ದಿನ ನಡೆಸುತ್ತಿರುವುದರಿಂದ ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ.
ಈ ಹಿಂದೆ ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಪ್ರವೇಶ ಪರೀಕ್ಷೆಗಳನ್ನು ಅ.3ರಂದು ನಡೆಸುವುದಾಗಿ ತಿಳಿಸಲಾಗಿತ್ತು ಆದರೆ ಏಕಾಏಕಿ ಪರೀಕ್ಷೆಗಳನ್ನು ನ.24ಕ್ಕೆ ಮುಂದೂಡಲಾಗಿದೆ.
ಕೆ-ಸೆಟ್ ಅರ್ಹತಾ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಲ್ಲಿ ಮುಂದೆ ಹುದ್ದೆಗಳಿಗೆ ಹೋದಾಗ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಈ ಕಾರಣದಿಂದಲೇ ಅಭ್ಯರ್ಥಿಗಳು ಕೆ-ಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ ಆದರೆ ರಾಯಚೂರು ವಿಶ್ವವಿದ್ಯಾಲಯದ 18 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಗಾಗಿ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳೂ ಕೂಡ ಅಷ್ಟೆ ಮುಖ್ಯವಾಗಿರುವುದರಿಂದ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳ ಕನಸ್ಸಿಗೆ ನೀರೆರೆಚಿದಂತಾಗಿದೆ.
ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಪರೀಕ್ಷಾ ಪ್ರಾಧಿಕಾರಕ್ಕೆ ಮುಂಚೆಯೇ ತಿಳಿದಿರುತ್ತದೆ. ಎರಡಕ್ಕೂ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಒಂದೇ ದಿನ ಪರೀಕ್ಷೆಯನ್ನು ನಡೆಸಿದ್ದಲ್ಲಿ ಹೇಗೆ ಬರೆಯುತ್ತಾರೆ ಎಂಬುವ ಸಾಮಾನ್ಯ ಜ್ಞಾನವೂ ಪರೀಕ್ಷಾ ಪ್ರಾಧಿಕಾರಕ್ಕೆ ಇಲ್ಲವಾಯಿತೆ ಎಂಬ ಪ್ರಶ್ನೆ ಮೂಡುತ್ತಿದೆ.
ಕೆ-ಸೆಟ್ ಮತ್ತು ರಾಯಚೂರು ವಿವಿಯ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಪ್ರವೇಶ ಪರೀಕ್ಷೆ ಒಂದೇ ದಿನ ಇರುವುದರಿಂದ ಎರಡೂ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗುತ್ತದೆ ಯಾವುದಾದರೂ ಒಂದು ಪರೀಕ್ಷೆಯನ್ನು ಮುಂದೂಡಬೇಕೆಂಬ ಆಗ್ರಹ ಪರೀಕ್ಷೆಗೆ ನೊಂದಾಯಿಸಿಕೊಂಡ ಅಭ್ಯರ್ಥಿಗಳಿಂದ ಕೇಳಿ ಬರುತ್ತಿದೆ.
ಎರಡೂ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಪ್ರಾಧಿಕಾರಕ್ಕೆ ಗೊತ್ತಿರುತ್ತದೆ. ಆದರೂ ಒಂದೇ ದಿನ ಪರೀಕ್ಷೆ ನಡೆಸುವುದರಿಂದ ಏನು ಮಾಡುವುದೋ ತಿಳಿಯುತ್ತಿಲ್ಲ. ಈಗಾಗಲೇ ಎರಡೂ ಪರೀಕ್ಷೆಗಳಿಗೂ ಶುಲ್ಕ ಭರಿಸಲಾಗಿದೆ. | ಜಗನ್ನಾಥ, ಪರೀಕ್ಷಾರ್ಥಿ ಕೆ-ಸೆಟ್ ಪರೀಕ್ಷೆ ಬರೆಯಬೇಕೆನ್ನುವುದು ಹಲವರ ಕನಸ್ಸಾಗಿದೆ. ರಾಯಚೂರು ವಿಶ್ವವಿದ್ಯಾಲಯದ ನೇಮಕಾತಿ ಪ್ರವೇಶ ಪರೀಕ್ಷೆಯೂ ಮುಖ್ಯ, ಕೂಡಲೇ ಪ್ರಾಧಿಕಾರ ಎರಡರಲ್ಲಿ ಯಾವುದಾದರೂ ಒಂದು ಪರೀಕ್ಷೆಯನ್ನು ಮುಂದೂಡಲು ಕ್ರಮ ಕೈಗೊಳ್ಳಬೇಕು. | ಶರಣಪ್ಪ, ಪರೀಕ್ಷಾರ್ಥಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೆಟ್ ಮತ್ತು ಸೆಟ್ ಪರೀಕ್ಷೆ ಬರೆದವರೇ ಅರ್ಹರಿರುತ್ತಾರೆ. ಒಂದು ವೇಳೆ ನೆಟ್ ಪರೀಕ್ಷೆ ಬರೆದು ಸೆಟ್ ಬರೆಯದೇ ಇರುವವರು ಅಥವಾ ಬರೆಯುವ ಇಚ್ಚೆಯುಳ್ಳವರು ಪರೀಕ್ಷೆಗೆ ನೊಂದಾಯಿಸಿಕೊಂಡಿರಬಹುದು. ಆ ರೀತಿಯ ಯಾವ ಅಭ್ಯರ್ಥಿಯೂ ಈವರೆಗೂ ಲಿಖಿತ ರೂಪದಲ್ಲಿ ನಮಗೆ ತಿಳಿಸಿಲ್ಲ.. ಮುಂದಿನ ವರ್ಷವೂ ಕೆ-ಸೆಟ್ ಪರೀಕ್ಷೆಯನ್ನು ಬರೆಯಬಹುದಾಗಿದೆ. | ಎಚ್.ಪ್ರಸನ್ನ, ನಿರ್ದೇಶಕ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ