ಜಿಲ್ಲೆ

ಅಕ್ರಮವಾಗಿ ಸಾಗಿಸುತ್ತಿದ್ದ ಸೇಂದಿ ಜಪ್ತಿ

Gangavati - Shashidhara Shashidhara

ರಾಯಚೂರು: ಅಕ್ರಮವಾಗಿ ಸಾಗಿಸುತ್ತಿದ್ದ ಸಿಎಚ್ ಪೌಡರ್ ಮಿಶ್ರಿತ ಕಲಬೆರಕೆ ಸೇಂದಿಯನ್ನು ಜಪ್ತಿಪಡಿಸಕೊಳ್ಳಲಾಗಿದ್ದು, ಸಾಗಿಸುತ್ತಿದ್ದ 6 ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ನಗರದ ರೈಲು ನಿಲ್ದಾಣದಲ್ಲಿ ಮಂಗಳವಾರ ಜರುಗಿದೆ.

ಬಸವರಾಜ, ಶ್ರೀಕಾಂತ್, ಶಿವರಾಜ್, ತಿಮ್ಮಪ್ಪ, ನರಸಮ್ಮ ಮತ್ತು ಮಾರೆಪ್ಪ ಬಂಧಿತ ಆರೋಪಿಗಳಾಗಿದ್ದು, ಕೃಷ್ಣಾದಿಂದ ರಾಯಚೂರಿಗೆ ಸೇಂದಿ ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 150 ಲೀಟರ್ ಸೆಂದಿಯನ್ನು ಜಪ್ತಿಪಡಿಸಿಕೊಂಡಿದ್ದಾರೆ.

ಬೀದರ್-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಿಎಚ್ ಪೌಡರ್ ಮಿಶ್ರಿತ ಸೇಂದಿಯನ್ನು ಬಾಟಲಿಗಳಲ್ಲಿ ತುಂಬಿಕೊಂಡು ಸಾಗಣೆ ಮಾಡುತ್ತಿದ್ದರು. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.