ಫೋಟೋ ಶೀರ್ಷಿಕೆ: 01-08-ಶಿವಾ-5 ರಾಯಚೂರು ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಸುಗೂರೇಶ ದೇಸಾಯಿಗೆ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಮನವಿ ಸಲ್ಲಿಸಲಾಯಿತು. ಸಂಸ್ಥೆ ಪದಾಧಿಕಾರಿಗಳಾದ ವೀರೇಶ ಜಲಗಾರ, ರವಿ ಚಂದ್ರಬಂಡಾ, ವನ್ನಪ್ಪ, ಈರಣ್ಣ, ಸುರೇಶ, ರಾಜೇಶ, ಜಂಬಣ್ಣ ಇದ್ದರು. 
ಜಿಲ್ಲೆ

ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆ ಸರಳಗೊಳಿಸಿ


ರಾಯಚೂರು: ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವ ಮೂಲಕ ಮಹಿಳೆಯರಿಗೆ ಅನುಕೂಲ ಕಲ್ಪಿಸಬೇಕು ಎಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಒತ್ತಾಯಿಸಿದೆ.

ಸಂಸ್ಥೆ ನಿಯೋಗ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಸುಗೂರೇಶ ದೇಸಾಯಿಗೆ ಮಂಗಳವಾರ ಮನವಿ ಸಲ್ಲಿಸಿ, ಸರ್ಕಾರ ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದರಿಂದ ಸಮಸ್ಯೆಯಾಗುತ್ತಿದ್ದು, ಮುಕ್ತ ವೆಬ್‌ಸೈಟ್ ಮಾಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಯೋಜನೆಗೆ ಅರ್ಜಿ ಸಲ್ಲಿಸಲು ಕೂಲಿಕಾರ್ಮಿಕರು ಕೆಲಸ ಬಿಟ್ಟು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದ್ದು, ವೃದ್ಧರು, ಗರ್ಭಿಣಿಯರಿಗೆ ತೊಂದರೆಯಾಗುತ್ತಿದೆ ಎಂದರು. ನಿಯೋಗದಲ್ಲಿ ಸಂಸ್ಥೆ ಪದಾಧಿಕಾರಿಗಳಾದ ವೀರೇಶ ಜಲಗಾರ, ರವಿ ಚಂದ್ರಬಂಡಾ, ವನ್ನಪ್ಪ, ಈರಣ್ಣ, ಸುರೇಶ, ರಾಜೇಶ, ಜಂಬಣ್ಣ ಇತರರಿದ್ದರು.