oplus_2 
ಜಿಲ್ಲೆ

ಬಾಪೂಜೀ ವಿಚಾರಧಾರೆಗಳು ಎಲ್ಲೆಡೆ ಪಸರಿಸಲಿ: ಸಚಿವ ಎನ್.ಎಸ ಬೋಸರಾಜು ಅಭಿಪ್ರಾಯ

ರಾಯಚೂರು: ಮಹಾತ್ಮಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆಯ ಸಂದೇಶ ಹಾಗೂ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಹೇಳಿದರು.

ನಗರದ ಮಹಾತ್ಮಗಾಂಧೀ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿರುವ ಗಾಂಧೀ ಪುತ್ಥಳಿಗೆ ಮಾಲರ್ಪಣೆ ಮಾಡಿ ಬುಧವಾರ ಮಾತನಾಡಿ, ಗಾಂಧೀಜಿಯವರ ವಿಚಾರಧಾರೆಗಳು ಜಗತ್ತಿನಾದ್ಯಂತ ಪಸರಿಸಬೇಕು. ಸತ್ಯ ಮತ್ತು ಅಂಹಿಸೆ ಮಾರ್ಗ, ಸ್ವಾತಂತ್ರೃ ಚಳುವಳಿಯು ಇತಿಹಾಸದ ಹಾದಿಯನ್ನು ಬದಲಾಯಿಸಿತು. ಗಾಂಧೀಜಿಯವರ ಸತ್ಯಾಗ್ರಹ ಮತ್ತು ಅಹಿಂಸಾತ್ಮಕ ಪರಿಕಲ್ಪನೆ ಹಿಂಸಾಚಾರವನ್ನು ಆಶ್ರಹಿಸದೆ ಸ್ವಾತಂತ್ರೃ ಹೋರಾಟದಲ್ಲಿ ಭಾಗಿಯಾಗಲು ಲಕ್ಷಾಂತರ ಜನರನ್ನು ಪ್ರೇರೆಪಿಸಿತು ಎಂದರು.

ಸ್ವಚ್ಛ ಭಾರತದ ಪರಿಕಲ್ಪನೆಯ ಕನಸನ್ನು ಗಾಂಧೀಜಿ ಕಂಡಿದ್ದರು. ಸ್ವಾತಂತ್ರೃಕ್ಕಿಂತ ನೈರ್ಮಲ್ಯ ಮುಖ್ಯ ಎಂಬ ಪರಿಕಲ್ಪನೆಯ ಅವರದ್ದಾಗಿತ್ತು. ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯಕ, ನಗರಸಭೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಡಿಸಿ ಕೆ.ನಿತೀಶ್, ಜಿ.ಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಎಸ್ಪಿ ಎಂ.ಪುಟ್ಟಮಾದಯ್ಯ, ಎಡಿಸಿ ಶಿವಾನಂದ ಭಜಂತ್ರಿ, ತಹಸೀಲ್ದಾರ್ ಸುರೇಶ್ ವರ್ಮಾ,ನಗರಾಭಿವೃದ್ಧಿ ಕೋಶದ ಪಿಡಿ ಜಗದೀಶ್ ಗಂಗಣ್ಣನವರ್,ಆರ್‌ಡಿಎ ಆಯುಕ್ತ ಜಿಲಾನಿ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಪಾಟೀಲ್, ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ಎಡಿ ವೀರೇಶ ನಾಯಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಫ್‌ಡಿಎ ಲಿಂಗರಾಜ್, ಪ್ರಮುಖರಾದ ಎ.ಪ್ರಕಾಶ್, ಸೇರಿದಂತೆ ಇತರರಿದ್ದರು.