oplus_2 
ಜಿಲ್ಲೆ

ಸ್ಪರ್ಧಾತ್ಮಕ ಪರೀಕ್ಷೆ: ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಗೈರು

Gangavati - Shashidhara Shashidhara

ರಾಯಚೂರು: ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳ ನೇಮಕಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳು ಜಿಲ್ಲೆಯ 50 ಕೇಂದ್ರಗಳಲ್ಲಿ ಬೆಳಿಗ್ಗೆ ಹಾಗೂ ಮದ್ಯಾಹ್ನದ ಅಧಿವೇಶನಗಳಲ್ಲಿ ಶುಕ್ರವಾರ ನಡೆದವು.

ಜಿಲ್ಲಾದ್ಯಂತ್ಯ ಪರೀಕ್ಷೆಗೆ 15,557 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದು, ಬೆಳಿಗ್ಗೆ 10:30ಕ್ಕೆ ಆರಂಭವಾದ ಮೊದಲ ಪತ್ರಿಕೆ ಪರೀಕ್ಷೆಗೆ 14,393 ಅಭ್ಯರ್ಥಿಗಳು ಹಾಜರಾಗಿದ್ದಾರೆ ಉಳಿದಂತೆ 1164 ಅಭ್ಯರ್ಥಿಗಳು ಗೈರಾಗಿದ್ದಾರೆ.

ಎರಡನೇ ಪತ್ರಿಕೆಯ ಪರೀಕ್ಷೆಯಲ್ಲಿ 14,367 ಅಭ್ಯರ್ಥಿಗಳು ಹಾಜರಾಗಿದ್ದು, 1190 ಅಭ್ಯರ್ಥೀಗಳು ಗೈರಾಗಿದ್ದಾರೆ.

ರಾಯಚೂರು ನಗರದ 31, ದೇವದುರ್ಗ ತಾಲೂಕಿನ 5, ಮಾನ್ವಿಯ 9 ಹಾಗೂ ಸಿಂಧನೂರು ನಗರದ 5 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು.