ಜಿಲ್ಲೆ

ಅನ್ಯ ಭಾಷೆಯ ಸಿನಿಮಾ ಪ್ರದರ್ಶನ ಬಂದ್ ಮಾಡುವಂತೆ ಕರವೇ ಪ್ರತಿಭಟನೆ

Gangavati - Shashidhara Shashidhara

ರಾಯಚೂರು: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ಮಾತ್ರ ಪ್ರದರ್ಶಿಸಬೇಕಂಬ ನಿಯಮವನ್ನು ಉಲ್ಲಂಘಿಸಿ ಅನ್ಯ ಭಾಷೆಯ ಚಿತ್ರಗಳನ್ನು ಪ್ರದರ್ಶಿಸಿದ್ದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರು ನಗರದ ಮಿರಾಜ್ ಚಿತ್ರಮಂದಿರಕ್ಕೆ ನುಗ್ಗಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಮಿರಾಜ್ ಚಿತ್ರಮಂದಿರದ ನಾಲ್ಕೂ ಸ್ಕ್ರೀನ್‌ಗಳಲ್ಲಿ ಒಂದರಲ್ಲಿ ಮಾತ್ರ ಕನ್ನಡ ಸಿನಿಮಾ ಪ್ರದರ್ಶನಗೊಳ್ಳುತ್ತಿತ್ತು. ಉಳಿದ ಸ್ಕ್ರೀನ್‌ಗಳಲ್ಲಿ ಅನ್ಯ ಭಾಷೆಯ ಸಿನಿಮಾ ತೋರಿಸಲಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಕರವೇ ಹೋರಾಟಗಾರರು ಅನ್ಯ ಭಾಷೆಯ ಚಿತ್ರಗಳನ್ನು ಬಂದ್ ಮಾಡಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್, ಪ್ರಮುಖರಾದ ಸುಧಾಕರ ಕುರ್ಡಿ, ಮಲ್ಲಿಕಾರ್ಜುನ, ಅಜೀಜ್ ಸೇರಿದಂತೆ ಇತರರಿದ್ದರು.