ಜಿಲ್ಲೆ

ಸ್ಮರಣ ಸಂಚಿಕೆಗೆ ಲೇಖನಗಳ ಆಹ್ವಾನ: ಶರಣಪ್ಪ‌ ಆನೇಹೊಸೂರು

ರಾಯಚೂರು: ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಜಿಲ್ಲೆಯಲ್ಲಿ ಎರಡನೇ ಜಿಲ್ಲಾ ಸಮ್ಮೇಳನವನ್ನು ನವೆಂಬರ್ ಮೊದಲ ವಾರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಪರಿಷತ್‌ನ ಜಿಲ್ಲಾಧ್ಯಕ್ಷ ಶರಣಪ್ಪ ಆನೆಹೊಸೂರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಜಾನಪದ ಸಮ್ಮೇಳನವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಸಮ್ಮೇಳನದ ದಿನದಂದು ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು ಅದಕ್ಕಾಗಿ ಸಾಹಿತಿಗಳು ಹಾಗೂ ಲೇಖಕರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ ಎಂದರು.

ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಜಾನಪದ ಕಲಾವಿದರ ಪರಿಚಯದ ಲೇಖನಗಳು ಸೇರಿದಂತೆ ಜಾನಪದ ಕಲೆಗಳ ಕುರಿತು ಮಾತ್ರ ಲೇಖನಗಳನ್ನು ಅ.15ರೊಳಗಾಗಿ ಪರಿಷತ್‌ನ ಇಮೇಲ್ ಐಡಿ 'janapadraichur@gmail.com’ ಅಥವಾ ‘anehosurpv@gmail.com’ ಗೆ ಕಳಿಸಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ಅರುಣಾ ಹಿರೆಮಠ, ವಿದ್ಯಾ, ಬಸವರಾಜ್, ವಿಜಯರಾಜೇಂದ್ರ ಸೇರಿದಂತೆ ಇತರರಿದ್ದರು.