ಜಿಲ್ಲೆ

ಕುಷ್ಠ ರೋಗಿಗಳ ಕುಟುಂಬಕ್ಕೆ ಅನ್ನದಾನ ಮೂಲಕ ಆಸರೆಯಾದ ದಾನಿಗಳು

ರಾಯಚೂರು: ಕುಷ್ಠ ರೋಗಿಗಳಿಗೆ ಕೊನೆಗೂ ದಾನಿಗಳು ಶುಕ್ರವಾರ ಅನ್ನದಾನ ಮಾಡುವ ಮೂಲಕ ಆಸರೆಗೆ ಧಾವಿಸಿದ್ದಾರೆ. ಯಾವುದೇ ದಾನಿಗಳು ನೇರವಾಗಿ ಆಹಾರ ಪೂರೈಕೆಗೆ ಅವಕಾಶ ಇಲ್ಲದ ಕಾರಣ ಜಿಲ್ಲಾಡಳಿತದ ಸೂಚನೆ ಮೇರೆಗೆ ಕೆಲ ದಾನಿಗಳು ಆಹಾರ ಪೊಟ್ಟಣಗಳನ್ನು ಕಾಲನಿಯ ಎಲ್ಲ ನಿವಾಸಿಗಳಿಗೆ ಪೂರೈಕೆ ಮಾಡಿದರು. ಆರ್‌ಟಿಒ ಬಳಿಯ ಕಾಲನಿಯಲ್ಲಿರುವ 50 ಕುಟುಂಬಗಳು ಈ ಮೂಲಕ ನಿರಾಳವಾದಂತಾಗಿವೆ. ಈ ಕುರಿತು ವಿಜಯವಾಣಿ ’ಉಪವಾಸದಲ್ಲಿ 150 ಕುಷ್ಠರೋಗಿಗಳು’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.