ರಾಯಚೂರು ಡಿಸಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಮಹ್ಮದ್ ಆಸೀಫ್‌ಗೆ ನಗರಸಭೆ, ಪುರಸಭೆ, ಪಪಂ ಹೊರಗುತ್ತಿಗೆ ನೌಕರರ ಸಂಘದ ಪ್ರಮುಖರು ಸೋಮವಾರ ಮನವಿ ಸಲ್ಲಿಸಿದರು. 
ಜಿಲ್ಲೆ

ವೇತನ ವ್ಯತ್ಯಾಸದ ಹಣ ಮಂಜೂರು ಮಾಡಿ

Raichur

ರಾಯಚೂರು: ಎರಡು ವರ್ಷಗಳ ವೇತನ ವ್ಯತ್ಯಾಸದ ಹಣ ಮಂಜೂರು ಮಾಡಬೇಕು. ಇಎಸ್‌ಐ ಮತ್ತು ಪಿಎಫ್ ಹಣವನ್ನು ಗುತ್ತಿಗೆದಾರರಿಂದ ವಸೂಲಿ ಮಾಡುವಂತೆ ಒತ್ತಾಯಿಸಿ ನಗರಸಭೆ, ಪುರಸಭೆ, ಪಪಂ ಹೊರಗುತ್ತಿಗೆ ನೌಕರರ ಸಂಘದ ಪ್ರಮುಖರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ರಾಯಚೂರು ನಗರಸಭೆಯಲ್ಲಿ ಹೊರಗುತ್ತಿಗೆಯಡಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಮರ್ಪಕ ವೇನತ ನೀಡಬೇಕು. ಹೊರಗುತ್ತಿಗೆ ವಾಹನ ಚಾಲಕರಿಗೆ 2015 ರಿಂದ 2021ರವರೆಗೆ ಗುತ್ತಿಗೆದಾರರು ಇಎಸ್‌ಐ, ಪಿಎಫ್ ಹಣ ಪಾವತಿಸಿಲ್ಲ. ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು. 2015 ರಿಂದ 2017ರವರೆಗೆ ವೇತನ ವ್ಯತ್ಯಾಸದ ಹಣ ಪಾವತಿ ಮಾಡಬೇಕು. ಬಾಕಿಯಿರುವ 3 ತಿಂಗಳ ವೇತನವನ್ನು ನೀಡಬೇಕು. ಪ್ರತಿ ತಿಂಗಳು ನಿಗದಿತವಾಗಿ ವೇತನ ಪಾವತಿಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.