ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು. 
ಜಿಲ್ಲೆ

ಸರಳವಾಗಿ ಸಂತ ಸೇವಾಲಾಲ್ ಜಯಂತಿ ಆಚರಣೆ

ರಾಯಚೂರು/ಮಾನ್ವಿ: ಸ್ಥಳೀಯ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ಸರಳವಾಗಿ ಸಂತ ಸೇವಾಲಾಲ್ ಮಹಾರಾಜ್ ಜಯಂತಿ ಆಚರಿಸಲಾಯಿತು. ಸಂತ ಸೇವಾಲಾಲ್ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ. ಅವಿನಾಶ ಮೆನನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಮಾಲಾರ್ಪಣೆ ಮಾಡಿದರು. ಸಹಾಯಕ ಆಯುಕ್ತ ರಜನಿಕಾಂತ ಚವ್ಹಾಣ್, ತಹಸೀಲ್ದಾರ್ ಡಾ. ಹಂಪಣ್ಣ ಸಜ್ಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಬಂಜಾರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ದೇವರಾಜ ಉಪಸ್ಥಿತರಿದ್ದರು.

ಆದರ್ಶ ಪಾಲನೆಗೆ ಮನವಿ
ಮಾನ್ವಿ: ವಿಶ್ವಸಂತ ಸೇವಾಲಾಲರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ ತಿಳಿಸಿದರು. ಪಟ್ಟಣದ ತಹಸಿಲ್ ಕಚೇರಿಯಲ್ಲಿ ಮಂಗಳವಾರ ಸಂತ ಸೇವಾಲಾಲರ 283ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಬಂಜಾರ ಸಮುದಾಯ ಇಂದಿಗೂ ತಾಂಡಾಗಳಲ್ಲಿ ಶ್ರಮದಾಯಕ ಜೀವನ ನಡೆಸುತ್ತಿದ್ದು, ಶೈಕ್ಷಣಿಕ, ಆರ್ಥಿಕವಾಗಿ ಸದೃಢಗೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ ಎಂದರು.

ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಶಿರಸ್ತೇದಾರ್ ವಿರುಪಣ್ಣ, ಬಂಜಾರ ಸಮಾಜದ ಅಧ್ಯಕ್ಷ ಗೋವಿಂದರಾಜ, ಮುಖಂಡರಾದ ಗೋವಿಂದ ಪವಾರ್, ಯಂಕಪ್ಪ ಕಾರಬಾರಿ, ಪಾಂಡು ಪವಾರ್, ಬುಡ್ಡಪ್ಪನಾಯಕ, ಹನುಮಂತ ಸೀಕಲ್, ಹನುಮೇಶನಾಯಕ, ಮೌನೇಶ ರಾಠೋಡ್, ಕೃಷ್ಣ ರಾಠೋಡ್, ಅಯ್ಯಪ್ಪ, ಬಸವರಾಜ ಹರವಿ, ಚೇತನ್ ಮತ್ತಿತರರಿದ್ದರು.