ಜಿಲ್ಲೆ

ಚಿತ್ರದುರ್ಗದಲ್ಲಿ ಮೇದಾರ ಬುಡಕಟ್ಟು ಸಮಾವೇಶ

ಅಶೋಕ್ ಕುಮಾರ್ ಎನ್

ರಾಯಚೂರು: ಚಿತ್ರದುರ್ಗದ ಮೇದಾರ ಕೇತೇಶ್ವರ ಮಠದಲ್ಲಿ ಮೇದಾರ ಬುಡಕಟ್ಟು ಸಮಾವೇಶ ಮತ್ತು ವಿವಿಧ ಕಾರ್ಯಕ್ರಮಗಳನ್ನು ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಮೇದಾರ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಣ ಮೇದಾರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಕೇತೇಶ್ವರ ಮಹಾಮಠದ ಉದ್ಘಾಟನೆ, ಶಿವಶರಣೆ ಸಾತವ್ವ ತಾಯಿ, ಹನುಮಯ್ಯ ಸ್ವಾಮೀಜಿ ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಪ್ರಮುಖರಾದ ಎಚ್.ಎಚ್.ಮ್ಯಾದಾರ, ಈರಯ್ಯ, ಹುಸೇನಪ್ಪ, ವೀರೇಶ, ನರಸಿಂಹಲು ಇದ್ದರು.