ರಾಯಚೂರು: ಬರವಣಿಗೆ, ಸಾಮಾಜಿಕ ಚಿಂತನೆ ಮತ್ತು ಕನ್ನಡಪರ ಹೋರಟದಲ್ಲಿ ಚಂದ್ರಶೇಖರ ಪಾಟೀಲರ ಪಾತ್ರ ಬಹುಮುಖ್ಯವಾದದ್ದು ಎಂದು ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ್ ಕಳಸ ಹೇಳಿದರು.
ನಗರದ ಪಿಸಿಪಿಬಿ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಂಪಾರ ಬದುಕು ಮತ್ತು ಬರಹದ ಕುರಿತು ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿಸವ ಮೂಲಕ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಇದನ್ನೂ ಓದಿ: ವೈಟಿಪಿಎಸ್ ದಿನಗೂಲಿ ಕಾರ್ಮಿಕ ಸಾವು
ಕಟ್ಟಿ ಹಾಕಿದ ದೋಣಿಯಲ್ಲಿ ಹುಟ್ಟುಹಾಕುವ ಚಿಂತಕರಿಂದ ಯಾವುದೇ ಪ್ರಯೋಜನವಿಲ್ಲ. ದೋಣಿಯಲ್ಲಿ ಪ್ರಯಾಣಿಸಲು ಕಟ್ಟಿದ ಹಗ್ಗವನ್ನು ಮೊದಲು ಕಿತ್ತುಹಾಕಬೇಕು. ಚಂಪಾ ಅವರ ಹೋರಾಟದ ಬದುಕಿನ ಕಣ ಕಣದಲ್ಲೂ ಕನ್ನಡತನವಿತ್ತು. ಪ್ರತಿ ಹಳ್ಳಿಗಳಲ್ಲಿ ಚಳುವಳಿಯನ್ನು ಹಮ್ಮಿಕೊಂಡ ಮಹಾನ್ ಹೋರಾಟಗಾರ ಎಂದು ತಿಳಿಸಿದರು.
ಸಾಹಿತ್ಯ ಹಾಗೂ ಬರವಣಿಗೆಯ ಮೂಲಕ ಹೋರಾಟದ ಸ್ವರೂಪವನ್ನು ಬದಲಿಸಿದ ಚಂಪಾರವರು. ಮೂಡ ನಂಬಿಕೆಗಳ ವಿರುದ್ಧ ಅನೇಕ ವಿಡಂಬನಾತ್ಮಕ ಸಾಹಿತ್ಯಗಳನ್ನು ಬರೆಯುವ ಮೂಲಕ ಇಡೀ ನಾಡಿನ ಸುಧಾರಣೆಗೆ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಇದನ್ನೂ ಓದಿ: ಎ.ಎಸ್. ಪಾಟೀಲ ವಾಣಿಜ್ಯ ಕಾಲೇಜಿನಲ್ಲಿ ವಿಚಾರ ಸಂಕಿರಣ
ಈ ಸಂದರ್ಭದಲ್ಲಿ ಎಸ್‌ಇಆರ್‌ಡಿ ಸೊಸೈಟಿ ಅಧ್ಯಕ್ಷ ಶರಣಬಸವ ಪಾಟೀಲ್ ಜೋಳದಹೆಡಗಿ, ಸೇವಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ್, ಪತ್ರಕರ್ತ ರಘುನಾಥ ರೆಡ್ಡಿ, ಪ್ರದ್ಯಾಪಕ ವೀರೇಶ ಹುಲಿ, ಪ್ರಮುಖರಾದ ಬಸವರಾಜ್ ವೀರಣ್ಣ ನವಲಿ, ರಾಮಲಿಂಗಪ್ಪ, ರಾಮಣ್ಣ ಮ್ಯಾದಾರ್, ನರಸಿಂಹಲು ವಡವಾಟಿ, ಸಿದ್ದರಾಮಪ್ಪ ಮಾಲೀಪಾಟೀಲ್, ಬಷೀರ್ ಅಹ್ಮದ್ ಹೊಸಮನಿ ಸೇರಿದಂತೆ ಇತರರಿದ್ದರು.