ಬಸವರಾಜ್  
ಜಿಲ್ಲೆ

ಯುವ ಬ್ರಿಗೇಡ್‍ನಿಂದ ಕಾರ್ಗಿಲ್‍ ವಿಜಯೋತ್ಸವ: ಬಸವರಾಜ್‍

ರಾಯಚೂರು: ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆ ಯುವ ಬ್ರಿಗೇಡ್ ವತಿಯಿಂದ ಜು.24ರಂದು ಸಂಜೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮುಟ್ಟಿದ್ರೆ ತಟ್ಟಿಬಿಡ್ತೀವಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ರಿಗೇಡ್ ಜಿಲ್ಲಾ ಸಂಚಾಲಕ ಬಸವರಾಜ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಂಗಳವಾರ ಮಾತನಾಡಿ, ಅಂದು ಕಾರ್ಯಕ್ರಮದ ಸಾನಿಧ್ಯವನ್ನು ಕಲ್ಲೂರು ಮಠದ ಶಿವಾನಂದ ಭಾರತಿ ಸ್ವಾಮೀಜಿ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ ಎಂದು ತಿಳಿಸಿದರು.

ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಆರು ಜನ ಕಾರ್ಗಿಲ್ ಯೋದರು ಅತಿಥಿಗಳಾಗ ಭಾಗವಹಿಸಿ ಕಾರ್ಗಿಲ್ ಯುದ್ದದ ಕುರಿತು ಅನುಭವವನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ರಿಗೇಡ್‌ನವಿಭಾಗೀಯ ಸಂಚಾಲಕ ಲಕ್ಷ್ಮಣ ಕಲ್ಮಲಾ ಪ್ರಮುಖರಾದ ಶರಣಗೌಡ, ಸುದೀಪ್, ಕೃಷ್ಣ, ಲಕ್ಷ್ಮೀಕಾಂತ ಸೇರಿದಂತೆ ಇತರರಿದ್ದರು.