ರಾಯಚೂರು: ಭವ್ಯ ಭಾರತದ ಸಮಾಜಕ್ಕೆ ಶಿಕ್ಷಕರೇ ಮಾರ್ಗದರ್ಶಕರಾಗಿದ್ದು ಅವರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ವೀರಶೈವ ಬಿ.ಎಡ್ ಕಾಲೇಜಿನಲ್ಲಿ ಖಾಸಗಿ ಶಿಕ್ಷಣ ಆಡಳಿತ ಮಂಡಳಿ ಒಕ್ಕೂಟ, ಯುವ ಪ್ರಶಿಕ್ಷಕರ ಸಂಘ ಹಾಗೂ ಎಚ್‌ಸಿಎಂಎಸ್‌ಕೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ಉದ್ಯೋಗ ಮೇಳ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಶಿಕ್ಷಕರು ಶ್ರೇಷ್ಠ ಪ್ರಜೆಗಳನ್ನು ಒಳಗೊಂಡ ಸಮಾಜ ನಿರ್ಮಿಸುವ ಶಿಲ್ಪಿಗಳು. ಪದವಿ ಮುಗಿದ ಯುವಕರು ಶಿಕ್ಷಕರ ಮೇಳವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಒಕ್ಕೂಟದ ಎಸ್.ಎಲ್.ಕೇಶವರೆಡ್ಡಿ ಮಾತನಾಡಿ, ಬಿ.ಇಡಿ ಪದವೀಧರರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶಿಕ್ಷಕರ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದು ನಿರುದ್ಯೋಗಿಗಳಿಗೆ ಆಶಾ ಕಿರಣವಾಗಲಿದ್ದು ಇಲ್ಲಿ ಉತ್ತಮ ಸಂದರ್ಶನ ನೀಡಿ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಉದ್ಯೋಗ ಕಂಡುಕೊಳ್ಳಬೇಕು ಎಂದು ಹೇಳಿದರು.
ಪ್ರಮುಖರಾದ ಬಸವರಾಜ್ ಗದಗಿನ, ಶರಣರೆಡ್ಡಿ ಪಾಟೀಲ್, ಹೇಮರೆಡ್ಡಿ ಪಾಟೀಲ್, ಆಂಜನೇಯ, ಜೋಸೆಫ್ ಇತರರಿದ್ದರು.
19-ರಾಯಚೂರು-1
ರಾಯಚೂರಿನ ವೀರಶೈವ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕರ ಉದ್ಯೋಗ ಮೇಳ ಕಾರ್ಯಕ್ರಮವನ್ನು ಶ್ರೀಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಒಕ್ಕೂಟದ ಎಸ್.ಎಲ್.ಕೇಶವರೆಡ್ಡಿ, ಯುವ ಪ್ರಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿಜಯ ರಾಜೇಂದ್ರ, ಶರಣಬಸವ ಭೂಪಾಲನಾಡಗೌಡ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿಕೆ ಮುರುಳಿಧರ್ ಇದ್ದರು.