ಬಸವರಾಜ್ ಗೋಡಿಹಾಳ 
ಜಿಲ್ಲೆ

ಬೃಹತ್ ವಧು, ವರರ ಸಮಾವೇಶ ಸೆ.14ರಿಂದ: ಬಸವರಾಜ್ ಗೋಡಿಹಾಳ

Gangavati - Shashidhara Shashidhara

ರಾಯಚೂರು: ಕನಕ ಸಂಸ್ಕಾರ ಬಳದಿಂದ ಸೆ.14ರಿಂದ 16ರವರೆಗೆ ಹಾಲುಮತ ಸಮಾಜದ ವಧು, ವರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಗೌರವಾಧ್ಯಕ್ಷ ಬಸವರಾಜ್ ಗೋಡಿಹಾಳ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸಿಂಧನೂರಿನಲ್ಲಿ ಹಾಲುಮತ ಸಮಾಜದ ಬೃಹತ್ ವಧು, ವರರ ಸಮಾವೇಶ ನಡೆಯಲಿದೆ. ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳ ಕುರುಬ ಸಮಾಜದವರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಸಮಾಜದ ಜನರು ಈ ಸಮಾವೇಶದ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.9448222555ಗೆ ಸಂಪರ್ಕಿಸಬಹುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಹನುಮೇಶ್, ಬಸವರಾಜ್ ಭಂಗಿ, ಶಿವರಾಜ್, ಈರಪ್ಪ, ಲಿಂಗಪ್ಪ ಸೇರಿದಂತೆ ಇತರರಿದ್ದರು.