ರಾಯಚೂರು ನಗರದ ಜವಹಾರ್‌ನಗರ ಬಡಾವಣೆಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ವತಿಯಿಂದ 4ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಪರಿಷತ್ತಿನ ರಾಜ್ಯಾಧ್ಯಕ್ಷ ರಾಘವೇಂದ್ರ ಭಟ್ ಉದ್ಘಾಟಿಸುತ್ತಿರುವುದು. ರಾಜ್ಯ ಪ್ರದಾನ ಕಾರ್ಯದರ್ಶಿ ಭಾನುಪ್ರಕಾಶ ಶರ್ಮಾ, ಸಹ ಕಾರ್ಯದರ್ಶಿ ಪ್ರದೀಪ್ ಭಟ್, ಖಜಾಂಚಿ ರಮೇಶ್ ಜೋಯಿಸ್, ರಾಯಚೂರು ಜಿಲ್ಲಾಧ್ಯಕ್ಷ ಟಿ.ರಾಮಚಂದ್ರ ಸೋಮಯಾಜಿ, ಪ್ರಮುಖರಾದ ಗಿರೀಶ್ ಆಚಾರ್ಯ, ಭರತ್, ಆನಂದ ಇದ್ದರು. 
ಜಿಲ್ಲೆ

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ, ಪುರೋಹಿತರ ಪರಿಷತ್ ವಾರ್ಷಿಕ ಮಹಾಸಭೆ

ರಾಯಚೂರು: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ವತಿಯಿಂದ 4ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಗರದ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶನಿವಾರ ಅದ್ದೂರಿಯಾಗಿ ಜರುಗಿದವು.

ಬೆಳಿಗ್ಗೆ 8 ಗಂಟೆಗೆ ಶೋಭಾಯಾತ್ರೆ, ನಂತರ ಗಾಯತ್ರಿ ಹೋಮ, ವೇದ ಪಾರಾಯಣ ಕಾರ್ಯಕ್ರಮಗಳು ನಡೆದವು. ನಂತರ 10 ಗಂಟೆಗೆ ಪರಿಷತ್ತಿನ ರಾಜ್ಯಾಧ್ಯಕ್ಷ ರಾಘವೇಂದ್ರ ಭಟ್ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ಜರುಗಿತು.

ಸಭೆಗೂ ಮುನ್ನ ಶಂಕರಾಚಾರ್ಯರು, ಮಧ್ವಾಚಾರ್ಯರು ಹಾಗೂ ರಾಮಾನುಜಾಚಾರ್ಯರ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರ ಅನುಗ್ರಹದಲ್ಲಿ ಸಭೆಯನ್ನು ಉದ್ಘಾಟಿಸಲಾಯಿತು.

ಸಭೆಯಲ್ಲಿ 2024-25ನೇ ಸಾಲಿನ ಸಭೆಯ ತಿಳುವಳಿಗಳು, ವರದಿಗಳ ಮಂಡನೆ, ಪರಿಶೀಲನೆ ಕುರಿತು ಹಾಗೂ ಇತರೆ ವಿಷಯಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ತಿನ ರಾಜ್ಯ ಪ್ರದಾನ ಕಾರ್ಯದರ್ಶಿ ಭಾನುಪ್ರಕಾಶ ಶರ್ಮಾ, ಸಹಕಾರ್ಯದರ್ಶಿ ಪ್ರದೀಪ್ ಭಟ್, ಖಜಾಂಚಿ ರಮೇಶ್ ಜೋಯಿಸ್, ರಾಯಚೂರು ಜಿಲ್ಲಾಧ್ಯಕ್ಷ ಟಿ.ರಾಮಚಂದ್ರ ಸೋಮಯಾಜಿ, ಪ್ರಮುಖರಾದ ಗಿರೀಶ್ ಆಚಾರ್ಯ, ಭರತ್, ಆನಂದ ಸೇರಿದಂತೆ ಇತರರಿದ್ದರು.