ಜಿಲ್ಲೆ

ಗುರುರಾಜ ಸುಂಕದ್ ವ್ಯವಸ್ಥಾಪನಾ ಮಂಡಳಿ ಸದಸ್ಯ

ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಡೀನ್ ಡಾ.ಗುರುರಾಜ್ ಸುಂಕದ್ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ(ತಿದ್ದುಪಡಿ) ಅಧಿನಿಯಮ 2013ರನ್ವಯ ವಿವಿಯ ಡೀನ್ ಒಬ್ಬರನ್ನು ನಾಮನಿರ್ದೇಶನ ಮಾಡಬೇಕಾಗಿರುವುದರಿಂದ ಆ.7ರಂದು ಸುಂಕದ್ ಅವರನ್ನು ವ್ಯವಸ್ಥಾಪನಾ ಮಂಡಳಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಕುಲಸಚಿವ ಡಾ.ಎಂ ವೀರನಗೌಡ ಆದೇಶ ಹೊರಡಿಸಿದ್ದಾರೆ.