ರಾಯಚೂರು: ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ರಾಯಚೂರು ತಾಲೂಕಿನ ಚಿಕ್ಕಸುಗೂರು ಗ್ರಾಮದಲ್ಲಿ ಭಾನುವಾರ ಜರುಗಿದೆ.
ಚಿಕ್ಕಸುಗೂರು ಗ್ರಾಮದಲ್ಲಿ ವಾಸಿಸುತ್ತಿದ್ದ ಆಂಧ್ರ ಪ್ರದೇಶದ ಇ.ಚೆಡ್ ಗ್ರಾಮದ ಜನಾರ್ಧನ(35) ಹಾಗೂ ಲಿಂಗಸುಗೂರು ಮೂಲದ ಚನ್ನಬಸವ ಪಾಟೀಲ್(26) ಮೃತಪಟ್ಟಿದ್ದಾರೆ.
ಶಿಲ್ಪಾ ಮೆಡಿಕೇರ್‌ನಲ್ಲಿ ನೌಕರನಾಗಿದ್ದ ಜನಾರ್ಧನ ಮತ್ತು ರಾಯಚೂರು ಕೆಮಿಕಲ್ಸ್‌ನಲ್ಲಿ ನೌಕರನಾಗಿದ್ದ ಚನ್ನಬಸವ ಇಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಮೃತ ದೇಹಗಳನ್ನು ರಾಯಚೂರಿನ ರಿಮ್ಸ್ ಶವಗಾರಕ್ಕೆ ಸಾಗಿಸಲಾಗಿದ್ದು, ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.