ಜಿಲ್ಲೆ

ಯಾತ್ರೆಗೆ ಅಪಾರ ಬೆಂಬಲ

Raichur

ರಾಯಚೂರು: ಪಕ್ಷದ ಎಲ್ಲ ಪ್ರಮುಖರ ಸಂಘಟಿತ ಪ್ರಯತ್ನದಿಂದ ಜಿಲ್ಲೆಯಲ್ಲಿ ರಾಹುಲ್‌ಗಾಂಧಿ ಅವರ ಭಾರತ್ ಐಕ್ಯತಾ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಹೇಳಿದರು.

ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಿಲ್ಲೆಯಲ್ಲಿ ಮೂರು ದಿನ ನಡೆದ ಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ವಿವಿಧ ಕ್ಷೇತ್ರಗಳ ಜನರು ಅಪಾರ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ತಾಲೂಕಿನ ತುಂಗಭದ್ರಾ ಸೇತುವೆಯಿಂದ ಕೃಷ್ಣಾ ನದಿ ಸೇತುವೆ ಮೂಲಕ ತೆಲಂಗಾಣಕ್ಕೆ ಹೋಗುವವರೆಗೂ ಜನಸಾಗರ ನೆರೆದಿತ್ತು ಎಂದರು.

ರಾಹುಲ್‌ಗಾಂಧಿ ಬಗ್ಗೆ ಅಪಪ್ರಚಾರ ಮಾಡುವವರಿಗೆ ಯಾತ್ರೆ ಹೊಸ ಸಂದೇಶ ನೀಡಿದೆ. ಪಕ್ಷದಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೂ ಎಲ್ಲವನ್ನು ಬದಿಗೊತ್ತು ಸಂಘಟಿತರಾಗಿ ಕೆಲಸ ಮಾಡಿದ್ದೇವೆ ಎಂದು ರವಿ ಬೋಸರಾಜ ಹೇಳಿದರು. ನಗರಸಭೆ ಸದಸ್ಯ ಸಾಜೀದ್ ಸಮೀರ್, ಪ್ರಮುಖರಾದ ನರಸಿಂಹಲು ಮಾಡಗಿರಿ, ಯು.ಗೋವಿಂದರೆಡ್ಡಿ ಉಪಸ್ಥಿತರಿದ್ದರು.