ಜಿಲ್ಲೆ

ಡಿ.11ಕ್ಕೆ ಭಗವದ್ಗೀತಾ ಮಹಾಸಮರ್ಪಣಾ ಕಾರ್ಯಕ್ರಮ

ರಾಯಚೂರು: ಭಗವದ್ಗೀತಾ ಅಭಿಯಾನದ ವತಿಯಿಂದ ಗೀತಾ ಜಯಂತಿ ಅಂಗವಾಗಿ ಭಗವದ್ಗೀತಾ ಮಹಾಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಜಿಲ್ಲಾಧ್ಯಕ್ಷ ಡಾ.ಆನಂದತೀರ್ಥ ಫಡ್ನೀಸ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಡಿ.11ರಂದು ನಗರದ ಎಲ್.ವಿ.ಡಿ ಕಾಲೇಜು ಮುಂದಿನ ಯಾದವ ಸಮಾಜದ ಮೈದಾನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಸಾನಿಧ್ಯವನ್ನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಸುಲ್ತಾನಪುರ ಬೃಹನ್ಮಠದ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿಪ್ರಶ್ರೀ ಪ್ರಶಸ್ತಿ ಪುರಸ್ಕೃತ ನರಸಿಂಗರಾವ್ ದೇಶಪಾಂಡೆ, ಆರ್‌ಡಿಎ ಮಾಜಿ ಅಧ್ಯಕ್ಷರಾದ ಬಿ.ಗೋವಿಂದ, ಕಡಗೋಲ ಆಂಜನೇಯ್ಯ, ನಗರಸಭೆ ಸದಸ್ಯರಾದ ಈ.ಶಶಿರಾಜ, ಹರೀಶ ನಾಡಗೌಡ, ತೆರಿಗೆ ಸಲಹೆಗಾರ ಮಂಜುನಾಥ ಸೇರಿದಂತೆಬಿತರ ಗಣ್ಯರು ಇರಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಈಶ್ವರ ಹೆಗಡೆ, ರಾಮರಾವ್ ಗಣೇಕಲ್, ಶ್ರೀಧರ ಅಗ್ನಿಹೋತ್ರ, ಹರೀಶ ಸೇರಿದಂತೆ ಇತರರಿದ್ದರು.