ನಾಗಮ್ಮಳ್, ಉಪಾಧ್ಯಕ್ಷೆ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘ. 
ಜಿಲ್ಲೆ

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ

Raichur

ರಾಯಚೂರು: ಹಲವು ವರ್ಷಗಳಿಂದ ಪಾಳು ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ ಆಗ್ರಹಿಸಿ ಅ.18ರಂದು ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಉಪಾಧ್ಯಕ್ಷೆ ನಾಗಮ್ಮಳ್ ಹೇಳಿದರು.

ಸರ್ಕಾರವು ಬಗರ್‌ಹುಕುಂ ಸಾಗುವಳಿದಾರರಿಗೆ ಫಾರಂ ನಂ.53ರಡಿ ಅರ್ಜಿ ಸಲ್ಲಿಸಿದರೆ ಪಟ್ಟಾ ನೀಡುವುದಾಗಿ ಭರವಸೆ ನೀಡಿದ್ದು, ಕಳೆದ ಐದು ತಿಂಗಳಿನಲ್ಲಿ 12 ಲಕ್ಷ ಅರ್ಜಿ ಸಲ್ಲಿಸಲಾಗಿವೆ. ಆದರೆ ಈವರೆಗೂ ಸಾಗುವಳಿದಾರರಿಗೆ ಪಟ್ಟಾ ನೀಡಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಜಮಾಲುದ್ದಿನ್, ಕಾರ್ಯದರ್ಶಿ ಮಲ್ಲನಗೌಡ, ಸಂಚಾಲಕ ಕಾರ್ತಿಕ್, ರೈತ ನರಸಿಂಹ ಇದ್ದರು.