ಸಿರವಾರದ ಗ್ರಾಮ ಸೇವಕ ಹುದ್ದೆಯನ್ನು ನಿಯಮಾವಳಿ ಪ್ರಕಾರ ನೇಮಕ ಮಾಡುವಂತೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಭಾರತೀಯ ಕಿಸಾನ್ ಸಂಘ ಸೋಮವಾರ ಪ್ರತಿಭಟನೆ ನಡೆಸಿತು.  
ಜಿಲ್ಲೆ

ನಿಯಮಾನುಸಾರ ಗ್ರಾಮ ಸೇವಕನ ನೇಮಿಸಿ

Raichur

ರಾಯಚೂರು: ಸಿರವಾರದ ಗ್ರಾಮ ಸೇವಕ ಹುದ್ದೆ ನೇಮಕದಲ್ಲಿ ನಿಯಮ ಉಲ್ಲಂಘಿಸಲಾಗಿದ್ದು, ಕೂಡಲೇ ನಿಯಮದಂತೆ ಹುದ್ದೆಯಲ್ಲಿದ್ದವರ ಕುಟುಂಬಸ್ಥರನ್ನು ಗ್ರಾಮ ಸೇವಕನೆಂದು ನೇಮಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಭಾರತೀಯ ಕಿಸಾನ್ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಲಾಯಿತು.

ಮೊದಲಿನಿಂದಲೂ ಗ್ರಾಮ ಸೇವಕ ಹುದ್ದೆಯನ್ನು ವಾಲೇಕರ್ ಕುಟುಂಬದವರು ಮಾಡುತ್ತ ಬರುತ್ತಿದ್ದು, ಅವರ ಕುಟುಂಬಕ್ಕೆ ಸಂಬಂಧವಿಲ್ಲದ ವ್ಯಕ್ತಿಯನ್ನು ಹುದ್ದೆಗೆ ನೇಮಕ ಮಾಡಲಾಗಿದೆ. ಗ್ರಾಮ ಸೇವಕರಾಗಿ ಕೆಲಸ ಮಾಡುತ್ತಿದ್ದ ಈರಣ್ಣ ವಾಲೇಕರ್ ನಿಧನದ ನಂತರ ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಲಾಗಿದೆ. ಇದರಿಂದ ವಾಲೇಕರ್ ಕುಟುಂಬಕ್ಕೆ ಅನ್ಯಾಯವಾಗಿದ್ದು, ಕೂಡಲೇ ಕುಟುಂಬದ ಸದಸ್ಯರೊಬ್ಬರನ್ನು ಗ್ರಾಮ ಸೇವಕ ಎಂದು ನೇಮಕ ಮಾಡುವಂತೆ ಒತ್ತಾಯಿಸಲಾಯಿತು.