ಜಿಲ್ಲೆ

ಮಣ್ಣಿನ ಆರೋಗ್ಯ ಕಾಪಾಡಲು ಮುಂದಾಗಿ: ಕಪಿಲ್ ಪಾಟೀಲ್

ರಾಯಚೂರು: ಮೆಣಸಿನಕಾಯಿ ಬೆಳೆಯಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಫಸಲನ್ನು ಪಡೆಯಬಹುದಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ತೊಟಗಾರಿಕೆ ವಿಭಾಗದ ಪ್ರಾಧ್ಯಾಪಕ ಕಪಿಲ್ ಪಾಟೀಲ್ ಹೇಳಿದರು.

ತಾಲೂಕಿನ ಮಟಮಾರಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಮೆಣಸಿನಕಾಯಿ ತೋಟಗಳಿಗೆ ಭೇಟಿ ನೀಡಿ ಬುಧವಾರ ಮಾತನಾಡಿದರು.
ತೋಟದ ಬೆಳೆಗಳಿಗೆ ಹೆಚ್ಚಿನ ರಾಸಾಯನಿಕ ವಸ್ತುಗಳನ್ನು ಬಳಸಬಾರದು, ಸಮಗ್ರ ಕೀಟ, ರೋಗ ನಿರ್ವಹಣೆಗೆ ಸಾವಾಯುವ ಪದ್ದತಿ ಬಳಕೆ ಮಾಡಬೇಕು ಜತೆಗೆ ಮಣ್ಣಿನ ಆರೋಗ್ಯ ಕಾಪಾಡಲು ರೈತರು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಮೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಗಿರೀಶರೆಡ್ಡಿ, ದೀಪಾ,ರಾಜೇಶ್ ರೆಡ್ಡಿ, ಅಕ್ಷತಾ.ಬಿ, ಚನ್ನವೀರ, ಧೀರಜ್,ಅನುಷಾ, ರೈತನಾದ ಪ್ರಾಣೇಶ ಇದ್ದರು.