ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ಕೃಷಿ, ತೋಟಗಾರಿಕೆ ವಿದ್ಯಾರ್ಥಿಳು ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನಿಡದಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದು.ಮಲ್ಲಿಕಾರ್ಜುನ ಶೆಟ್ಟರ್, ಚನ್ನವೀರ ಮಾಲೀಪಾಟೀಲ್, ಆಕಾಶರೆಡ್ಡಿ, ಸಂಗಮೇಶ ಮಾಳಗಿ, ದಿವ್ಯಾ, ಶ್ರೇಣಿಕ್, ಸ್ಪರ್ಶ, ತೇಜಸ್, ನವೀನ್, ಆದಿತ್ಯ, ಬ್ರಿಜೇಶ್, ವರ್ಷಿತ್ ಇದ್ದರು. 
ಜಿಲ್ಲೆ

ಕೃಷಿ ಕಾಲೇಜುಗಳ ಖಾಸಗೀಕರಣ ವಿರೋಧಿಸಿ  ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Gangavati - Shashidhara Shashidhara

ರಾಯಚೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಖಾಸಗಿ ಕಾಲೇಜುಗಳಿಗೆ ಅಫಿಲಿಯೇಷನ್ ನೀಡಲು ಅಧಿಸೂಚನೆ ಹೊರಡಿಸಿದ್ದು, ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡದಂತೆ ಕೃಷಿ ಮತ್ತು ತೋಟಗಾರಿಕೆ ವಿವಿಗಳ ವಿದ್ಯಾರ್ಥಿ ಒಕ್ಕೂಟದಿಂದ ದಿಢೀರ್ ಪ್ರತಿಭಟನೆಯನ್ನು ನಡೆಸಲಾಯಿತು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಈಗಾಗಲೇ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು(ಎಐಸಿಟಿಇ)ನ ಅನುಮತಿಯೊಂದಿಗೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಂದ ಪದವಿಗಳನ್ನು ಪಡೆದ ವಿದ್ಯಾರ್ಥಿಗಳು ಕೃಷಿ ಇಲಾಖೆಯ ಸರ್ಕಾರಿ ಕೆಲಸಕ್ಕೆ ಅರ್ಹತೆ ಗಳಿಸಿರುವುದು ಅತಿ ದೊಡ್ಡ ವಂಚನೆಯಾಗಿದೆ.

ಬೆಂಗಳೂರು ಕೃಷಿ ವಿವಿ ಸಹ ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡಲು ಹೊರಟಿದ್ದು ಇದರಿಂದ ಅನೇಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಕಷ್ಟ ಎದುರಾಗಿತ್ತದೆ ಕೂಡಲೇ ಈ ತೀರ್ಮಾನವನ್ನು ಕೈಬಿಡುವಂತೆ ಒತ್ತಾಯಿಸಲಾಯಿತು.

ಖಾಸಗಿ ಕಾಲೇಜು ಕೃಷಿ ಶಿಕ್ಷಣವನ್ನು ನೀಡಬೇಕಾದಲ್ಲಿ 5ನೇ ಡೀನ್ ಕಮಿಟಿಯ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಸ್ವತಃ ಭಾರತೀಯ ಕೃಷಿ ಸಂಶೋದನಾ ಪರಿಷತ್ತು(ಐಸಿಎಆರ್) ಅಫಿಲಿಯೇಷನ್ ನೀಡುತ್ತದೆ ಮತ್ತು ಯಾವುದೇ ಸಮಯದಲ್ಲಿ ಬೇಕಾದರೂ ಅನುಮತಿಯನ್ನು ರದ್ದುಪಡಿಸಬಹುದು.

ಖಾಸಗಿಯವರು ತಮ್ಮಲ್ಲಿರುವ ಸೌಕರ್ಯಗಳ ಕೊರತೆಯಿಂದ, ರಾಜಕೀಯ ಶಕ್ತಿ ಮತ್ತು ಹಣದ ಬಲದೊಂದಿಗೆ ವಿವಿಗಳ ಮೇಲೆ ಒತ್ತಡ ತಂದು ಅನುಮತಿಯನ್ನು ಪಡೆಯುವ ಹುನ್ನಾರವನ್ನು 14 ವರ್ಷಗಳಿಂದ ನಡೆಸುತ್ತಾ ಬಂದಿವೆ.

ಸರ್ಕಾರವು ಖಾಸಗಿ ಅವರಿಗೆ ಅನುಮತಿ ನೀಡುವ ಬದಲು ರಾಜ್ಯದ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಭೂಮಿ, ಮೂಲಭೂತ ಸೌಕರ್ಯಗಳಿದ್ದು ಮತ್ತು ವಿಜ್ಞಾನಿಗಳು, ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಗೊಂದು ಹೊಸ ಸರ್ಕಾರಿ ಕೃಷಿ ಕಾಲೇಜುಗಳನ್ನು ಸ್ಥಾಪಿಸಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ, ಶಿಕ್ಷಣದ ಗುಣಮಟ್ಟವನ್ನು ಕಾಪಾಡುವುದಲ್ಲದೆ, ಸಾರ್ವತ್ರಿಕ ಶಿಕ್ಷಣವನ್ನು ಎತ್ತಿ ಹಿಡಿದಂತಾಗುತ್ತದೆ.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ವಿದ್ಯಾರ್ಥಿಗಳ ಪರ ನಿಂತು ಅಫಿಲಿಯೇಷನ್ ಅನ್ನು ಖಾಸಗಿ ಕೃಷಿ ಕಾಲೇಜುಗಳಿಗೆ ನೀಡುವ ಪ್ರಸ್ತಾಪವನ್ನು ಕೈಬಿಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಶೆಟ್ಟರ್, ಚನ್ನವೀರ ಮಾಲೀಪಾಟೀಲ್, ಆಕಾಶರೆಡ್ಡಿ, ಸಂಗಮೇಶ ಮಾಳಗಿ, ದಿವ್ಯಾ, ಶ್ರೇಣಿಕ್, ಸ್ಪರ್ಶ, ತೇಜಸ್, ನವೀನ್, ಆದಿತ್ಯ, ಬ್ರಿಜೇಶ್, ವರ್ಷಿತ್ ಸೇರಿದಂತೆ ಇತರರಿದ್ದರು.