ರಾಯಚೂರಿನ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಪ್ರಥಮ ಚಿಕಿತ್ಸಾ ದಿನ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಕ್ಕಳು ರಾಧಾಕೃಷ್ಣ ವೇಷಧರಿಸಿ ಗಮನ ಸೆಳೆದರು. ರಾಜಯೋಗಿನಿ ಸ್ಮೀತಾ ಅಕ್ಕನವರು, ಡಿಎಚ್‌ಒ ಡಾ.ಸುರೇಂದ್ರ ಬಾಬು, ಮೂಳೆ ಮತ್ತು ಕೀಲು ತಜ್ಞ ಡಾ.ಅನಿರುದ್ಧ ಕುಲಕರ್ಣಿ, ಡಾ.ಶ್ರೀನಿವಾಸ್, ಡಿಎಸ್‌ಒ ಡಾ.ಗಣೇಶ ಇತರರಿದ್ದರು. 
ಜಿಲ್ಲೆ

ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಹಿರಿದು

ರಾಯಚೂರು: ರೋಗಿಗಳನ್ನು ಕಾಪಾಡುವ ವೈದ್ಯರ ವೃತ್ತಿ ಶ್ಲಾಘನೀಯ ಎಂದು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಸ್ಮೀತಾ ಅಕ್ಕ ಹೇಳಿದರು.

ಸಮಾಜದಲ್ಲಿ ವೈದ್ಯರಿಗೆ ದೇವರ ಸಮಾನ ಸ್ಥಾನ

ನಗರದ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರಥಮ ಚಿಕಿತ್ಸಾ ದಿನ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶನಿವಾರ ಮಾತನಾಡಿದರು. ಸಮಾಜದಲ್ಲಿ ವೈದ್ಯರಿಗೆ ದೇವರ ಸಮಾನ ಸ್ಥಾನ ನೀಡಲಾಗಿದೆ. ಜನರ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಹಿರಿದಾಗಿದೆ. ಹಾಗಾಗಿ ಅವರನ್ನು ಎಲ್ಲರೂ ಗೌರವಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಂದ್ರ ಬಾಬು ಮಾತನಾಡಿ, ಮಹಾಮಾರಿ ಕರೊನಾದ ಸಂಕಷ್ಟ ಸಮಯದಲ್ಲಿ ವೈದ್ಯರು ತಮ್ಮ ಜೀವನದ ಹಂಗು ತೊರೆದು ಜನರ ಜೀವ ಉಳಿಸಿದ್ದಾರೆ. ಕರೊನಾ ಗೆದ್ದು ಜಗತ್ತಿಗೆ ವೈದ್ಯಕೀಯ ಸೇವೆಯ ಘನತೆ ಹೆಚ್ಚಾಗುವಂತೆ ಮಾಡಿದೆ. ಆರೋಗ್ಯವೇ ಪ್ರತಿಯೊಬ್ಬರ ಸಂಪತ್ತು ಆಗಬೇಕು. ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಮೂಳೆ ಮತ್ತು ಕೀಲು ತಜ್ಞ ಡಾ.ಅನಿರುದ್ಧ ಕುಲಕರ್ಣಿ, ಡಾ.ಶ್ರೀನಿವಾಸ್, ಡಿಎಸ್‌ಒ ಡಾ.ಗಣೇಶ, ಆಪ್ತ ಸಮಾಲೋಚಕ ಖಾಜಾ ಹುಸೇನ್, ವಿವೇಕ್, ಗೀತಾ, ವೀರೇಶ, ಜಗದೀಶ ಪಾಟೀಲ್ ಇತರರಿದ್ದರು.