ಜಿಲ್ಲೆ

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ರಘು ಆಯ್ಕೆ

ಪ್ರಸಿನ್ ಕೆ.ಆರ್

ಹುಣಸೂರು: ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಅಧ್ಯಕ್ಷರಾಗಿ ರಘು ಮತ್ತು ಉಪಾಧ್ಯಕ್ಷರಾಗಿ ಸೀಮಾ ತಬಸ್ಸುಮ್ ಮತ್ತು ಮಮತಾ ಅವಿರೋಧವಾಗಿ ಆಯ್ಕೆಯಾದರು.

ಬುಧವಾರ ಶಾಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮುಖ್ಯಶಿಕ್ಷಕ ಸಿ.ಎಸ್.ಮಹೇಶ್ ಉಸ್ತುವಾರಿ ವಹಿಸಿದ್ದರು. ಶಿಕ್ಷಕರಾದ ಸಿ.ಎಸ್.ಮಮತಾ, ಸಾಹೇರಾಬಾನು, ಯಶೋದಾ, ಹೇಮಾವತಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಪಾಲಕರಾದ ರಾಚಪ್ಪ, ಪ್ರಭ, ಸಂಗೀತಾ, ಅನಿತಾ, ಶಬ್ರಿನ್, ಸಮೀನಾ, ಅಗಸ್ತ್ಯ ಫೌಂಡೇಷನ್‌ನ ರವಿಕುಮಾರ್, ಎಸ್.ಡಿ.ಎಂ.ಸಿ.ಯ ಎಲ್ಲ ನಿಕಟಪೂರ್ವ ಸದಸ್ಯರು ಉಪಸ್ಥಿತರಿದ್ದರು. ಆಯ್ಕೆಗೊಂಡ ಎಲ್ಲರನ್ನೂ ಶಾಲೆ ವತಿಯಿಂದ ಸನ್ಮಾನಿಸಲಾಯಿತು.