ಜಿಲ್ಲೆ

ರಾಘವೇಂದ್ರ ಶ್ರೀಗಳ ಆರಾಧನೆ 20ರಿಂದ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ರಾಮಕೃಷ್ಣನಗರದ ಭಕ್ತಾದಿಗಳ ರಾಯರ ಮಠದಲ್ಲಿ ಶ್ರೀ ಗುರುಸಾರ್ವಭಾಮ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವವನ್ನು ಆ. 20ರಿಂದ ಆಯೋಜಿಸಲಾಗಿದೆ.

ಆ. 19ರಂದು ಬೆಳಗ್ಗೆ 6ಕ್ಕೆ ಶ್ರಾವಣಿ ಕಾರ್ಯಕ್ರಮ, ಸಂಜೆ 7ಕ್ಕೆ ಧ್ವಜಾರೋಹಣ, ಧಾನ್ಯಪೂಜೆ ನಡೆಯಲಿದೆ.

ಆ. 20ರಂದು ಬೆಳಗ್ಗೆ 6ಕ್ಕೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, 9ಕ್ಕೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, 10.30ಕ್ಕೆ ರಥೋತ್ಸವ, ಮಧ್ಯಾಹ್ನ 12ಕ್ಕೆ ಹಸ್ತೋದಕ, ತೀಥ್ರ ಪ್ರಸಾದ ನಡೆಯಲಿದೆ.

ಆ. 21ರಂದು ಮಧ್ಯಾರಾಧನೆ ನಿಮಿತ್ತ ಬ್ರಾಹ್ಮಣರ ಅಲಂಕಾರ ಪೂಜೆ, ಸಂಜೆ 7ಕ್ಕೆ ಅಷ್ಟಾವಧಾನ, ತೊಟ್ಟಿಲು ಪೂಜೆ, ಮಹಾಮಂಗಳಾರತಿ ಜರುಗಲಿದೆ. ಆ. 22ರಂದು ಸೇವಾಕರ್ತರಿಗೆ ಸನ್ಮಾನ, ಲಮಂತ್ರಾಕ್ಷತೆ ವಿತರಣೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.